ತಿರುಪತಿ: ಅಗಾಧವಾದ ಭಕ್ತ ಸಮೂಹವನ್ನು ಹೊಂದಿರುವ ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಿ ಈ ಬಾರಿಯೂ ಸಹ ಒಂದೇ ದಿನದಲ್ಲಿ 10 ಕೋಟಿ ರೂ. ಕಾಣಿಕೆ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆದಿದೆ.
ಹಲವು ಟ್ರಸ್ಟ್ಗಳಿಂದ ತಿಮ್ಮಪ್ಪನಿಗೆ ಕಾಣಿಕೆಯಾಗಿ ಒಂದೇ ದಿನದಲ್ಲಿ 10 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಮಾಹಿತಿ ನೀಡಿದೆ. ತಮಿಳುನಾಡಿನ ತಿರುನಲ್ವೇಲಿಯ ಉದ್ಯಮಿ ಹಾಗೂ ತಿಮ್ಮಪ್ಪನ ಭಕ್ತ ಗೋಪಾಲ ಬಾಲಕೃಷ್ಣನ್ ಎಂಬುವವರು ಸುಮಾರು 7 ಕೋಟಿ ರೂ. ಕಾಣಿಕೆ ದೇವರಿಗೆ ಅರ್ಪಿಸಿದ್ದಾರೆ. ಇನ್ನುಳಿದ ಶ್ರೀ ವೆಂಕಟೇಶ್ವರ ವಿದ್ಯಾದಾನ ಟ್ರಸ್ಟ್ ಸೇರಿದಂತೆ ಇತರೆ ಎರಡು ಟ್ರಸ್ಟ್ಗಳು ತಲಾ 1 ಕೋಟಿ ರೂ. ಕಾಣಿಕೆ ನೀಡಿವೆ. ಹಾಗಾಗಿ ದಿನದಲ್ಲೇ 10 ಕೋಟಿ ರೂ. ಸಂಗ್ರಹವಾಗಿದೆ. ಈ ಅಷ್ಟೂ ಹಣವನ್ನು ಡಿಡಿ ಮೂಲಕ ಭಕ್ತರು ನೀಡಿದ್ದಾರೆ ಎಂದು ಟಿಟಿಡಿ ಹೇಳಿಕೊಂಡಿದೆ.
