ಬಂಟ್ವಾಳ: ದೇವಸ್ಥಾನದ ಮುಂದೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಂತ ಆಕೆಯ ಬಳಿಯಲ್ಲಿ ಸಂಗ್ರಹವಾಗಿದ್ದು ಮಾತ್ರ ಬರೋಬ್ಬರಿ 1 ಲಕ್ಷ ಹಣ. ಹೀಗೆ ಸಂಗ್ರಹವಾದಂತ ಹಣವನ್ನು ಆ ಮಹಾತಾಯಿ, ದೇವಸ್ಥಾನದ ಅನ್ನದಾನ ನಿಧಿಗೆ ಅರ್ಪಿಸಿ, ಗಮನ ಸೆಳೆದಿದ್ದಾರೆ.
ಹೌದು.. ಭವತೀ ಭಿಕ್ಷಾಂದೇಹಿ ಎಂದು ದೇವಸ್ಥಾನದ ಆವರಣದಲ್ಲಿಯೇ ಭಿಕ್ಷಾಟನೆ ಮಾಡುತ್ತಿದ್ದಂತ ಅಶ್ವತ್ತಮ್ಮ (80) ಎಂಬ ವೃದ್ಧೆ, ಭಿಕ್ಷಾಟನೆಯಿಂದ ಸಂಗ್ರಹವಾಗಿದ್ದಂತ 1 ಲಕ್ಷ ಹಣವನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅನ್ನದಾನ ನಿಧಿಗೆ ಅರ್ಪಿಸಿ, ಮಹಾ ಧಾನೆ ಎನಿಸಿಕೊಂಡಿದ್ದಾರೆ.
ಅಂದಹಾಗೇ ಅಶ್ವತ್ತಮ್ಮ ಪೊಳಲಿ ದೇವಸ್ಥಾನದ ಆವರಣದ ವಠಾರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ವರ್ಷದ ಬಹುತೇಕ ಸಮಯ ಮಾಲಾಧಾರಿ ಆಗಿದ್ದುಕೊಂಡೇ ಅಯ್ಯಪ್ಪನ ಸೇವೆ ಕೂಡ ಮಾಡುತ್ತಿದ್ದರು. ಕುಟುಂಬದಲ್ಲಿ ಬಡತನವಿದ್ದರೂ, ಆ ಬಗ್ಗೆ ಚಿಂತಿಸುತ್ತಿರಲಿಲ್ಲ. ದೇವರಿದ್ಧಾನೆ ಎನ್ನುವ ನಂಬಿಕೆ ಆಕೆಯಲ್ಲಿತ್ತು. ಹೀಗೆ ದಿನಂಪ್ರತಿ ಭಿಕ್ಷೆ ಬೇಡಿದ್ದರಿಂದ ಸಂಗ್ರಹವಾಗಿದ್ದು ಬರೋಬ್ಬರಿ 1 ಲಕ್ಷ. ಇದೇ ಹಣವನ್ನು ರಾಜರಾಜೇಶ್ವರಿ ದೇವಸ್ಥಾನದ ಅನ್ನದಾನ ನಿಧಿಗೆ ನೀಡಿ, ಗಮನ ಸೆಳೆದಿದ್ದಾರೆ.
