Friday, March 29, 2024
spot_img
More

    Latest Posts

    ವೆಂಟಿಲೇಟರ್ ಸಮಸ್ಯೆಯಿಂದ ಮಹಿಳೆ ಮೃತ್ಯು ? ಜಿಲ್ಲಾ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ

    ಮಂಗಳೂರು, ಮೇ 9: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕುಟುಂಬಸ್ಥರು ಅಲ್ಲಿನ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಟ್ಲ ಸಮೀಪದ ಸಾಲೆತ್ತೂರು ನಿವಾಸಿ ಭಾರತಿ ರೈ(52) ಮೃತ ಮಹಿಳೆ. ಮೇ 5ರಂದು ಅವರನ್ನು ಪುತ್ತೂರಿನಲ್ಲಿ ತಪಾಸಣೆಗೆ ಒಳಪಡಿಸಿದ್ದು, ಕೊರೊನಾ ಪಾಸಿಟಿವ್ ಆಗಿದ್ದರು. ಪಲ್ಸ್ ರೇಟ್ ಕಡಿಮೆ ಇದ್ದುದರಿಂದ ಮಂಗಳೂರಿಗೆ ಕರೆತಂದು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಮಹಿಳೆಗೆ ಆಕ್ಸಿಜನ್ ಕೊಟ್ಟಿದ್ದರಿಂದ ಸ್ವಲ್ಪ ಗುಣಮುಖರಾಗಿದ್ದರು. ಊಟ, ತಿಂಡಿಯನ್ನೂ ಮಾಡುತ್ತಿದ್ದರು. ವೆನ್ಲಾಕ್ ಆಸ್ಪತ್ರೆಗೆ ದಾಖಲಾದ ಬಳಿಕವೂ ಫೋನಲ್ಲಿ ಮಾತನಾಡುತ್ತಿದ್ದರು.9-5-2021ರ ಮಧ್ಯಾಹ್ನವೂ ಫೋನಲ್ಲಿ ಮಾತನಾಡಿದ್ದಾರೆ. ಆದರೆ, ವೆಂಟಿಲೇಟರ್ ಗೆ ಹಾಕಿದ್ದರಂತೆ. ಸಂಜೆ ವೇಳೆಗೆ ಮೃತಪಟ್ಟಿರುವ ಬಗ್ಗೆ ವೈದ್ಯರು ಹೇಳುತ್ತಿದ್ದಾರೆ. ಕೇಳಿದ್ದಕ್ಕೆ ವೆಂಟಿಲೇಟರ್ ಸರಿಯಿಲ್ಲ ಎನ್ನುತ್ತಿದ್ದಾರೆ. ನಾವು ಡ್ಯೂಟಿ ಡಾಕ್ಟರ್ ಇಬ್ಬರೇ ಇರುವುದು. ಎಲ್ಲವನ್ನೂ ಸಂಭಾಳಿಸಬೇಕು ಎನ್ನುತ್ತಿದ್ದಾರೆ ಎಂಬುದಾಗಿ ಮೃತರ ಸಂಬಂಧಿಕರು ದೂರಿದ್ದಾರೆ.

    ಸಂಬಂಧಿಕರು ಅಲ್ಲಿನ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತರಾಟೆಗೆತ್ತಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲದೆ, ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಕೂಡ ಆಸ್ಪತ್ರೆಗೆ ಬಂದಿದ್ದು, ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ. ವೆಂಟಿಲೇಟರ್ ಸಮಸ್ಯೆಯಿಂದಾಗಿ ಮಹಿಳೆಯ ಸಾವು ಆಗಿದೆಯೇ ಎನ್ನುವ ಬಗ್ಗೆ ಪೊಲೀಸರು ಮತ್ತು ಜಿಲ್ಲಾಡಳಿತ ತನಿಖೆ ನಡೆಸಬೇಕಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss