Tuesday, March 19, 2024
spot_img
More

    Latest Posts

    ಮಾವಿನ ಹಣ್ಣಿನ ಸಿಪ್ಪೆಯಲ್ಲೂ ಇದೆ ಸಾಕಷ್ಟು ಔಷಧೀಯ ಗುಣ

    ಬೇಸಿಗೆ ಬಂತಂದ್ರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಅಬ್ಬರ ಜೋರಾಗಿರುತ್ತದೆ. ಸೀಸನ್‌ನಲ್ಲಿ ಮಾವು ತಿನ್ನೋದು ಅಂದ್ರೆ ಹಬ್ಬವಿದ್ದಂತೆ. ಕೇವಲ ಮಾವಿನ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಮಾವಿನಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಬಿಸಾಡಬೇಡಿ.

    ಸಿಹಿ ಮತ್ತು ರಸಭರಿತ ಹಣ್ಣಾದ ಮಾವು ಸೇವಿಸುವಾಗ ಹೆಚ್ಚಿನ ಜನರು ಸಾಮಾನ್ಯವಾಗಿ ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಇದನ್ನೂ ಜೊತೆಯಲ್ಲಿ ತಿಂದರೆ ಮಾವಿನ ಹಣ್ಣಿನ ರುಚಿ ಕೆಡುತ್ತದೆ. ಆದರೆ ರುಚಿ ಹೇಗೇ ಇದ್ದರೂ ಮಾವಿನ ಹಣ್ಣಿನ ಸಿಪ್ಪೆ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.

    ಸಿಪ್ಪೆಗಳಲ್ಲಿ ಎಂಟಿ-ಒಕ್ಸಿಡೆಂಟ್ ಗುಣಲಕ್ಷಣಗಳಿವೆ. ಇದು ಕ್ಯಾನ್ಸರ್‌ನಿಂದ ನಮ್ಮನ್ನು ರಕ್ಷಿಸುತ್ತದೆ. ಮಾವಿನ ಸಿಪ್ಪೆಯು ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ನಿಂದ ರಕ್ಷಿಸಲು ಉಪಯುಕ್ತವಾಗಿದೆ.

    ಮಾವಿನ ಸಿಪ್ಪೆಯಲ್ಲಿ ಸಸ್ಯಗಳಲ್ಲಿ ಕಂಡುಬರುವ ಫೈಟೊನ್ಯೂಟ್ರಿಯೆಂಟ್‌ ಸಮೃದ್ಧವಾಗಿದೆ. ಮಾವಿನ ಸಿಪ್ಪೆ ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ತೂಕ ಕಳೆದುಕೊಳ್ಳಲು ಕಸರತ್ತು ಮಾಡುತ್ತಿರುವವರು ಅದರ ಸಿಪ್ಪೆಯನ್ನೂ ಸೇವನೆ ಮಾಡುವುದು ಉತ್ತಮ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss