Friday, April 19, 2024
spot_img
More

    Latest Posts

    ಮಂಗಳೂರು: ರೈಲ್ವೆ ಹಳಿಗೆ ಬಿದ್ದ ಕಂಟೈನರ್ ಲಾರಿ

    ಮಂಗಳೂರು: ಕಂಟೈನರ್ ಲಾರಿಯೊಂದು ಟರ್ನ್ ಮಾಡಲು ಹೋಗಿ ರೈಲ್ವೆ ಹಳಿಯ ಮೇಲೆಯೇ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ.

    ರಾತ್ರಿ 8.30 ಸುಮಾರಿಗೆ ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ ಬಳಿ ಈ ಘಟನೆ ನಡೆದಿದೆ.ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಜುಮ್ಮಾ ಮಸೀದಿ ಬಳಿಯ ಡೆಲಿವರಿ ಪಾರ್ಸೆಲ್ ಸಂಸ್ಥೆಗೆ ಸರಕುಗಳನ್ನು ಹೊತ್ತು ಕಂಟೈನರ್ ಲಾರಿ ಬಂದಿತ್ತು. ಲಾರಿಯಲ್ಲಿದ್ದ ಪಾರ್ಸೆಲ್​ಗಳನ್ನು ಖಾಲಿ ಮಾಡಲು ಕಂಟೈನರ್ ಲಾರಿಯನ್ನು ಚಾಲಕ ಟರ್ನ್ ಮಾಡುತ್ತಿದ್ದ ವೇಳೆ ಲಾರಿ ಆಯತಪ್ಪಿ ರೈಲ್ವೆ ಹಳಿಯ ಮೇಲೆಯೇ ಬಿದ್ದುಬಿಟ್ಟಿದೆ.ಗೂಡ್ಸ್ ರೈಲು ಬರುವ ಮೊದಲು ರೈಲು ಹಳಿಯ ಮೇಲೆಯೇ ಕಂಟೈನರ್ ಲಾರಿ ಬಿದ್ದಿದ್ದು, ಈಗಾಗಲೇ ಈ ಹಳಿಯ ಮೂಲಕ ಬರುವ ಗೂಡ್ಸ್ ರೈಲುಗಳನ್ನು ನಿಲುಗಡೆ ಮಾಡಲಾಗಿದೆ‌. ಲಾರಿಯನ್ನು ಕ್ರೇನ್ ಮೂಲಕ ಮೇಲತ್ತುವ ಪ್ರಯತ್ನವನ್ನು ಮಾಡಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss