ದಕ್ಷಿಣಕನ್ನಡ : ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆಯೊಂದು ಭಾರೀ ಮಳೆಯಿಂದ ನೆಲಸಮವಾಗಿರುವ ಘಟನೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಬಳಿ ನಡೆದಿದೆ.
ಮೂರು ದಿನದ ಹಿಂದೆ ಮರ ಬಿದ್ದು ಮನೆ ಗೋಡೆಗಳಲ್ಲಿ ಬಿರುಕು ಮೂಡಿದ್ದು,. ನಂತರ ಬಿರುಕು ಬಿಟ್ಟಿದ್ದ ಗೋಡೆ ದುರಸ್ತಿ ಮಾಡಿ ಗೃಹ ಪ್ರವೇಶಕ್ಕೆ ಸಜ್ಜು ಮಾಡಲಾಗಿತ್ತು.
ಜುಲೈ 18ರಂದು ಗೃಹಪ್ರವೇಶಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ಎಲ್ಲಾ ತಯಾರಿಯನ್ನು ಮಾಡಲಾಗಿತ್ತು. ಆದರೆ ಇದೀಗ ಗುಡ್ಡೆ ಕುಸಿದು ಮನೆ ನೆಲಸಮವಾಗಿದೆ.