Saturday, December 10, 2022

ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನ ಕುರಿತಂತೆ ಹೈಕೋರ್ಟ್ ಮಹತ್ವದ ಆದೇಶ

ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನ ಕುರಿತಂತೆ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಶಬರಿಮಲೆಯಲ್ಲಿ ಹೆಲಿಕಾಪ್ಟರ್ ಸೇವೆ ಅಥವಾ ವಿಐಪಿ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದ್ದು, ಎರಡು ರೀತಿಯ...
More

  Latest Posts

  BIG NEWS: ರಾಜ್ಯದ ಜನತೆಗೆ ಮತ್ತೊಂದು ಶಾಕ್: ‘ನಂದಿನಿ ತುಪ್ಪ, ಸಿಹಿ ತಿನಿಸು’ಗಳ ದರ ಹೆಚ್ಚಳ

  ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದರಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಈ ನಡುವೆಯೂ ಕೆ ಎಂ ಎಫ್ ನಿಂದ ನಂದಿನಿ ಹಾಲಿನ ದರಗಳನ್ನು ಹೆಚ್ಚಳ ಮಾಡಲಾಗಿತ್ತು....

  ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿ.ಟಿ ಉಷಾ ಆಯ್ಕೆ.!

  ನವದೆಹಲಿ: ನಾಳೆ ನಡೆಯಲಿರುವ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ನ ಮೊದಲ ಮಹಿಳಾ ಅಧ್ಯಕ್ಷರಾಗಿ ಪಿ.ಟಿ ಉಷಾ ಅವರು ಅಧಿಕೃತವಾಗಿ ಆಯ್ಕೆಯಾಗಲಿದ್ದಾರೆ‌. ಏಷ್ಯನ್ ಗೇಮ್ಸ್...

  ಉಡುಪಿ ಜಿಲ್ಲೆಯಾದ್ಯಂತ ಕೆಂಗಣ್ಣು ರೋಗ..!

  ಉಡುಪಿ: ಹವಾಮಾನ ಬದಲಾವಣೆಯಿಂದಾಗಿ ಉಡುಪಿ ಜಿಲ್ಲೆಯಾದ್ಯಂತ ಕೆಂಗಣ್ಣು ರೋಗ ಕಾಣಿಸಿಕೊಳ್ಳುತ್ತಿದೆ. ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್‌ಗೆ ಕಾರಣ ವೈರಾಣು ಅಥವಾ ಬ್ಯಾಕ್ಟೀರಿಯಾ. ಕಣ್ಣಿನ ಬಿಳಿಭಾಗದ ಮೇಲೆ ಮತ್ತು...

  ಈ ಫೋಟೋದಲ್ಲಿ ಕಾಣುವ ಬಾಲಕ ಕಾಣೆಯಾಗಿದ್ದಾನೆ

  ಫೋಟೋದಲ್ಲಿ ಕಾಣುವ ಬಾಲಕ ಬೆಂಗಳೂರು ಮೂಲದ ಬಾಲಕನಾಗಿದ್ದು ಸ್ವಲ್ಪ ಸಮಯದ ಹಿಂದೆ ಕಾಣೆಯಾಗಿದ್ದಾನೆ. ಈ ಬಗ್ಗೆ ಬೆಂಗಳೂರು ಅಶೋಕನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ...

  ಯುವಕನನ್ನು ಲಾಡ್ಜ್ ಗೆ ಕರೆಸಿ ಸುಲಿಗೆ: ಖತರ್ನಾಕ್ ಲೇಡಿ ಸೇರಿ ಮೂವರ ಬಂಧನ

  ಕೊಚ್ಚಿ: ಪ್ರೀತಿಯ ನಾಟಕವಾಡಿ, ಯುವಕನೊಬ್ಬನನ್ನು ಲಾಡ್ಜ್​ಗೆ ಕರೆಸಿಕೊಂಡು, ತನ್ನ ಮೂವರು ಪರಿಚಿತರೊಂದಿಗೆ ಸೇರಿ, ಯುವಕನ ಮೊಬೈಲ್​​ ಫೋನ್​, ಹಣ ಮತ್ತು ಒಡವೆಯನ್ನು ದೋಚಿದ್ದ ಖತರ್ನಾಕ್​ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ್ದು, ವಶಕ್ಕೆ ಪಡೆದಿರುವ ಆಕೆಯ ಮೊಬೈಲ್​ನಲ್ಲಿ ಮಹತ್ವದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

  ಬಂಧಿತ ಮಹಿಳೆಯನ್ನು ಹಸೀನಾ (28), ಆಕೆಯ ಪತಿ ಜೆ. ಜಿತಿನ್ (28), ಎಸ್​. ಅನ್ಶದ್​ (26) ಎಂದು ಗುರುತಿಸಲಾಗಿದೆ. ಈ ಮೂವರು ಉಮಯನಲ್ಲೂರು ಮೂಲದವರು. ಇನ್ನೊರ್ವ ಕೊಲ್ಲಂ ಮೂಲದ ಆರೋಪಿ ಅನಾಸ್, ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. ​​

  ಹಸೀನಾ ಸಾಕಷ್ಟು ಮಂದಿಯನ್ನು ತನ್ನ ಬಲೆಗೆ ಬೀಳಿಸಿ, ಹಣ ಮತ್ತು ಒಡವೆ ಸುಲಿಗೆ ಮಾಡಿರುವುದು ಆಕೆಯ ಮೊಬೈಲ್​​ನಿಂದ ಬಯಲಾಗಿದೆ. ವಿಡಿಯೋ ಕಾಲ್​ಗೆ ಸೇರಿಕೊಳ್ಳಿ ಎಂದು ಜನರನ್ನು ಕೇಳುತ್ತಿದ್ದಳು. ವಿಡಿಯೋ ಕಾಲ್​ನಲ್ಲಿ ಬಣ್ಣದ ಮಾತುಗಳನ್ನು ಆಡಿ, ಸಲುಗೆ ಬೆಳೆಸಿಕೊಳ್ಳುತ್ತಿದ್ದಳು. ಬಳಿಕ ಅವರನ್ನು ತಾನಿದ್ದಲ್ಲಿಗೆ ಕರೆಸಿಕೊಂಡು ದೋಚುವುದೇ ಈಕೆಯ ಕೆಲಸವಾಗಿತ್ತು. ಆಕೆಯ ಮೊಬೈಲ್​ನಲ್ಲಿ ವಿಡಿಯೋ ಕಾಲ್​ ಮಾಹಿತಿ, ಯಾರು ಯಾರನ್ನು ಸಂಪರ್ಕಿಸಿದ್ದಾಳೆ ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

  ಹಸೀನಾ ಸಿಕ್ಕಿಬಿದ್ದಿದ್ದು ಹೇಗೆ?
  ಕೊಟ್ಟಾಯಂನ ವೈಕ್ಕೊಮ್ ಮೂಲದ 34 ವರ್ಷದ ಸಂತ್ರಸ್ತ ಯುವಕನನ್ನು ಆರೋಪಿ ಹಸೀನಾ ಸಾಮಾಜಿಕ ಜಾಲತಾಣ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಆತನೊಂದಿಗೆ ನಿರಂತರವಾಗಿ ಮಾತನಾಡುತ್ತಾ ತುಂಬಾ ಹತ್ತಿರವಾಗಿದ್ದಳು. ಇದೇ ಸಲುಗೆಯಲ್ಲಿ ಹಸೀನಾ, ಯುವಕನನ್ನು ಎರ್ನಾಕುಲಂ ಜನರಲ್​ ಹಾಸ್ಪಿಟಲ್​ ಬಳಿಯಿರುವ ಲಾಡ್ಜ್​ಗೆ ಆಗಸ್ಟ್ 8ರಂದು ಕರೆದಿದ್ದಳು. ಆಕೆಯ ಮಾತು ನಂಬಿದ ಯುವಕ ಅಂದು ಲಾಡ್ಜ್​ನ ರೂಮ್​ ನಂಬರ್​ 205ಕ್ಕೆ ತೆರಳಿದ್ದ. ಕೊಠಡಿಯ ಒಳಗೆ ಹೋಗುತ್ತಿದ್ದಂತೆ ಹಸೀನಾ ಮತ್ತು ಇತರೆ ಮೂವರು ಆರೋಪಿಗಳು ಯುವಕನನ್ನು ಹಿಡಿದುಕೊಂಡು ಕುರ್ಚಿಗೆ ಕಟ್ಟಿಹಾಕಿದರು. ಬಾಯಿಗೆ ಬಟ್ಟೆ ತುರುಕಿ ಅಮಾನವೀಯವಾಗಿ ಹಲ್ಲೆ ಮಾಡಿದರು. ಬಳಿಕ ಯುವಕನ ಕತ್ತಿನಲ್ಲಿ ಚಿನ್ನದ ಸರ, ಬ್ರೇಸ್​ಲೆಟ್​, ರಿಂಗ್​ ಮತ್ತು 20 ಸಾವಿರ ರೂ. ಬೆಲೆ ಬಾಳುವ ಮೊಬೈಲ್​ ಫೋನ್​ ಮತ್ತು ಪಾಕೆಟ್​ನಲ್ಲಿದ್ದ 5 ಸಾವಿರ ರೂ. ನಗದು ದೋಚಿದ್ದರು. ಇಷ್ಟೇ ಅಲ್ಲದೆ, ಆತನ ಫೋನ್​ ಬಳಸಿಕೊಂಡು ಬಲವಂತವಾಗಿ ಆತನ ಬ್ಯಾಂಕ್​ ಖಾತೆಯಿಂದ 15 ಸಾವಿರ ರೂಪಾಯಿ ಹಣವನ್ನು ತಮ್ಮ ಬ್ಯಾಂಕ್​ ಖಾತೆಗೆ ವರ್ಗಾಯಿಸಿಕೊಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಹಲ್ಲೆಯಿಂದಾಗಿ ಯುವಕನ ಮೈಮೇಲೆ ತುಂಬಾ ಗಾಯಗಳಾಗಿತ್ತು. ಬಳಿಕ ಚಿಕಿತ್ಸೆ ಪಡೆದುಕೊಂಡು, ಆಗಸ್ಟ್ 13 ರಂದು ಎರ್ನಾಕುಲಂ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಡ್ಜ್‌ನಲ್ಲಿರುವ ಸಿಸಿಟಿವಿ ದೃಶ್ಯಗಳು ಮತ್ತು ಹಣ ವರ್ಗಾವಣೆಯಾಗಿರುವ ಖಾತೆಯ ಮೂಲಕ ಆರೋಪಿಗಳ ಸುಳಿವು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.

  Latest Posts

  BIG NEWS: ರಾಜ್ಯದ ಜನತೆಗೆ ಮತ್ತೊಂದು ಶಾಕ್: ‘ನಂದಿನಿ ತುಪ್ಪ, ಸಿಹಿ ತಿನಿಸು’ಗಳ ದರ ಹೆಚ್ಚಳ

  ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದರಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಈ ನಡುವೆಯೂ ಕೆ ಎಂ ಎಫ್ ನಿಂದ ನಂದಿನಿ ಹಾಲಿನ ದರಗಳನ್ನು ಹೆಚ್ಚಳ ಮಾಡಲಾಗಿತ್ತು....

  ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿ.ಟಿ ಉಷಾ ಆಯ್ಕೆ.!

  ನವದೆಹಲಿ: ನಾಳೆ ನಡೆಯಲಿರುವ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ನ ಮೊದಲ ಮಹಿಳಾ ಅಧ್ಯಕ್ಷರಾಗಿ ಪಿ.ಟಿ ಉಷಾ ಅವರು ಅಧಿಕೃತವಾಗಿ ಆಯ್ಕೆಯಾಗಲಿದ್ದಾರೆ‌. ಏಷ್ಯನ್ ಗೇಮ್ಸ್...

  ಉಡುಪಿ ಜಿಲ್ಲೆಯಾದ್ಯಂತ ಕೆಂಗಣ್ಣು ರೋಗ..!

  ಉಡುಪಿ: ಹವಾಮಾನ ಬದಲಾವಣೆಯಿಂದಾಗಿ ಉಡುಪಿ ಜಿಲ್ಲೆಯಾದ್ಯಂತ ಕೆಂಗಣ್ಣು ರೋಗ ಕಾಣಿಸಿಕೊಳ್ಳುತ್ತಿದೆ. ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್‌ಗೆ ಕಾರಣ ವೈರಾಣು ಅಥವಾ ಬ್ಯಾಕ್ಟೀರಿಯಾ. ಕಣ್ಣಿನ ಬಿಳಿಭಾಗದ ಮೇಲೆ ಮತ್ತು...

  ಈ ಫೋಟೋದಲ್ಲಿ ಕಾಣುವ ಬಾಲಕ ಕಾಣೆಯಾಗಿದ್ದಾನೆ

  ಫೋಟೋದಲ್ಲಿ ಕಾಣುವ ಬಾಲಕ ಬೆಂಗಳೂರು ಮೂಲದ ಬಾಲಕನಾಗಿದ್ದು ಸ್ವಲ್ಪ ಸಮಯದ ಹಿಂದೆ ಕಾಣೆಯಾಗಿದ್ದಾನೆ. ಈ ಬಗ್ಗೆ ಬೆಂಗಳೂರು ಅಶೋಕನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ...

  Don't Miss

  ದುಬೈಯಲ್ಲಿ ಕಲಿಯಲೆಂದು ತೆರಳಿದ್ದ ಕಾಪು ಮೂಲದ ವಿದ್ಯಾರ್ಥಿ ನಿಧನ

  ಉಡುಪಿ: ಪದವಿ ಶಿಕ್ಷಣ ಕಲಿಯಲೆಂದು ದುಬೈಗೆ ತೆರಳಿದ್ದ ಮೂಲತಃ ಕಾಪು ತಾಲೂಕಿನ ವಿದ್ಯಾರ್ಥಿಯೋರ್ವ ಅನಾರೋಗ್ಯದಿಂದ ಸೋಮವಾರ ನಿಧನರಾದರು. ಕಾಪು ಕೊಪ್ಪಲಂಗಡಿ ನಿವಾಸಿ ಅಬ್ದುಸ್ಸಲಾಂ ಸೂರಿಂಜೆ ಎಂಬವರ ಮಗ ...

  ಬಂಟ್ವಾಳ: ಯುವ ವಕೀಲರ ಮೇಲೆ ಪೊಲೀಸರ ದೌರ್ಜನ್ಯ-ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

  ಬಂಟ್ವಾಳ: ನ್ಯಾಯವಾದಿ ಕುಲ್‌ದೀಪ್ ಶೆಟ್ಟಿಯವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಪುಂಜಾಲಕಟ್ಟೆ ಠಾಣಾಧಿಕಾರಿ ಮತ್ತು ಇತರ ಪೊಲೀಸರನ್ನು ಅಮಾನತು ಮಾಡುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಲೀಗಲ್ ಫೋರಂ ಹಾಗೂ...

  ಚಾರ್ಮಾಡಿ ಘಾಟ್: ಟ್ರ್ಯಾಕ್ಟರ್ ಪಲ್ಟಿ ಓರ್ವ ಸಾವು..!

  ಚಾರ್ಮಾಡಿ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮತ್ತೋರ್ವ ಗಂಭೀರ ಗಾಯಗಳಾಗಿವೆ. ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಟ್ರ್ಯಾಕ್ಟರ್ ನಲ್ಲಿ ನೀರು ತುಂಬಿಸಿ...

  ಹಳೆ ವಿದ್ಯಾರ್ಥಿ ಸಂಘ ( ರಿ.) ಕೊಳಂಬೆ ಇವರ ವತಿಯಿಂದ ಅಯೋಜಿಸಿದ್ದ ʼಹಳ್ಳಿ ಕ್ರೀಡೋತ್ಸವʼ ಹಾಗೂ ʼವಾರ್ಷಿಕೋತ್ಸವʼದ ಸಮಾರೋಪ ಸಮಾರಂಭ

  ಮಂಗಳೂರು: ಹಳೆ ವಿದ್ಯಾರ್ಥಿ ಸಂಘ ( ರಿ.) ಕೊಳಂಬೆ ಇವರ ವತಿಯಿಂದ ಅಯೋಜಿಸಿದ್ದ ʼಹಳ್ಳಿ ಕ್ರೀಡೋತ್ಸವʼ ಹಾಗೂ ʼವಾರ್ಷಿಕೋತ್ಸವʼದ ಸಮಾರೋಪ ಸಮಾರಂಭ (ಡಿ.3)ಆದಿತ್ಯವಾರ ದಂದು ನಡೆಯಿತು.

  ಹೆಬ್ರಿ: ಆಟವಾಡುತ್ತಿದ್ದ 4ವರ್ಷದ ಬಾಲಕ ಸೆಗಣಿ ಗುಂಡಿಗೆ ಬಿದ್ದು ಸಾವು

  ಹೆಬ್ರಿ: ತೋಟದಲ್ಲಿ ಆಟವಾಡುತ್ತಿದ್ದ 4ರ ಹರೆಯದ ಪುಟ್ಟ ಬಾಲಕ ಸೆಗಣಿ ಗುಂಡಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿಯ ಬಚ್ಚಪ್ಪು ಎಂಬಲ್ಲಿ ನಡೆದಿದೆ.