Sunday, July 3, 2022

ಮಂಗಳೂರು : ಭಾರೀ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲವೃತ

ಮಂಗಳೂರು : ಮಂಗಳೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಲ್ಲೇ ನೀರು ನಿಂತಿದ್ದು,...
More

    Latest Posts

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ(4) ವಿದ್ಯುತ್...

    ವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ, ಮೂವರು ಅರೆಸ್ಟ್

    ವಿಟ್ಲ:ಅಕ್ರಮ ಮಾದಕವಸ್ತುಗಳ ಸಾಗಾಟದ ವೇಳೆ ಕಾರ್ಯಾಚರಣೆ ನಡೆಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಜಲಲೂದ್ಧಿನ್, ಪೈಝಲ್ ಎಂದು ಗುರುತಿಸಲಾಗಿದೆ

    Breaking News ನೂಪೂರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಮೆಡಿಕಲ್ ಶಾಪ್ ಮಾಲೀಕನ ಕೊಲೆ

    ಅಮರಾವತಿ : ದೇಶದಲ್ಲಿ ಸಂಚಲನ ಸೃಷ್ಟಿಸಿದ ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಮೊನ್ನೆಯಷ್ಟೆ ಉದಯಪುರದಲ್ಲಿ ಟೈಲರ್ ಓರ್ವನ ಶಿರಚ್ಚೇಧನವಾಗಿದೆ. ಸದ್ಯ ನೂಪುರ್ ಶರ್ಮಾ ಬೆಂಬಲಿಸಿದಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಮತ್ತೊಂದು ಹತ್ಯೆಯಾಗಿದೆ...

    ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ ಪ್ರದರ್ಶನ

    ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಮಾನವ ರಹಿತ ವೈಮಾನಿಕ ವಾಹನಗಳ ಅಭಿವೃದ್ಧಿಲಿ ಪ್ರಮುಖ ದಾಪುಗಾಲಿಟ್ಟಿದೆ. ಡಿಆರ್‌ಡಿಒ ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ...

    ಮಂಗಳೂರು: ಕೋವಿಡ್‌ ಲಕ್ಷಣಗಳಿದ್ದರೆ ಮಾತ್ರ ಆರ್‌ಟಿ-ಪಿಸಿಆರ್‌ ಪರೀಕ್ಷೆ

    ಮಂಗಳೂರು, ಮೇ 07 : ಇನ್ನು ಮುಂದೆ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಇದ್ದರೆ ಮಾತ್ರ ಆತನ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಇಲ್ಲವಾದರೆ ಆತನ ಆರ್‌ಟಿ-ಪಿಸಿಆರ್ ಪರೀಕ್ಷೆ ಜಿಲ್ಲೆಯಲ್ಲಿ ನಡೆಸಲಾ‌ಗುವುದಿಲ್ಲ. ಈ ನಿಯಮ ಮೇ 1 ರಿಂದಲೇ ಜಾರಿಗೆ ತರಲಾಗಿದೆ. ಏತನ್ಮಧ್ಯೆ ಪ್ರಮಾಣಪತ್ರದ ಅವಶ್ಯಕತೆ ಇದ್ದವರು ಯಾವುದೇ ಖಾಸಗಿ ಪ್ರಯೋಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ವೆಚ್ಚವನ್ನು ತಾವೇ ಭರಿಸಿ ಪರೀಕ್ಷೆಗೆ ಒಳಪಟ್ಟು ಪರೀಕ್ಷಾ ವರದಿಯನ್ನು ಪಡೆಯಬಹುದಾಗಿದೆ.

    ಪ್ರಸ್ತುತ, ಜನರು ಪರೀಕ್ಷೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ವೆನ್ಲಾಕ್ ಆಸ್ಪತ್ರೆಯಂತಹ ಸರ್ಕಾರಿ ಪರೀಕ್ಷಾ ಕೇಂದ್ರಗಳಿಗೆ ಹೋದರೆ ಅಲ್ಲಿ ವೈದ್ಯರು ಅವರನ್ನು ಮೊದಲು ಸಾಲಿನಲ್ಲಿ ಒಬ್ಬೊಬರದ್ದೆ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಜನರಿಗೆ ಕೆಮ್ಮು, ತಲೆನೋವು, ಮೈ ಕೈ ನೋವು ಮೊದಲಾದ ಕೊರೊನಾ ಸೋಂಕು ಲಕ್ಷಣಗಳು ಇದೆಯೇ ಎಂದು ಈ ವೈದ್ಯರು ಪರೀಕ್ಷಿಸಿ ಯಾವುದೇ ಕೊರೊನಾ ಲಕ್ಷಣಗಳು ಇಲ್ಲದವರ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸದೆ ವಾಪಾಸ್ ಕಳುಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

    ಜನರು ಅನಗತ್ಯವಾಗಿ ಭಯಭೀತರಾಗಿದ್ದಾರೆ. ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಪರೀಕ್ಷಾ ಕೇಂದ್ರಗಳಿಗೆ ಧಾವಿಸುತ್ತಿದ್ದಾರೆ. ಇದರಿಂದಾಗಿ ನಿಜವಾಗಿ ಕೊರೊನಾ ಸೋಂಕು ಇರುವವರ ಕೊರೊನಾ ವರದಿ ಲಭ್ಯತೆಯ ವಿಳಂಬಕ್ಕೆ ಕಾರಣವಾಗುತ್ತಿದೆ. ಈ ಕಾರಣದಿಂದಾಗಿ ಈ ಬದಲಾವಣೆಯನ್ನು ತರಲಾಗಿದೆ ಎಂದು ಹೇಳಲಾಗಿದೆ.

    ಇನ್ನು ಆರ್‌ಟಿ-ಪಿಸಿಆರ್ ಪರೀಕ್ಷಾ ಕಿಟ್‌ನ ಸಾಕಷ್ಟು ದಾಸ್ತಾನು ಇದೆ. ಟೆಸ್ಟ್ ಕಿಟ್‌ಗಳ ಕೊರತೆಯಿಂದ ಈ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಕೂಡಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ನಮ್ಮಲ್ಲಿ ಪ್ರಸ್ತುತ ಒಂದು ಲಕ್ಷ ಪರೀಕ್ಷಾ ಕಿಟ್‌ಗಳು ಇವೆ. ತೀರಾ ಅಗತ್ಯವಿರುವವರಿಗೆ ಕೊರೊನಾ ಸೋಂಕು ವರದಿಯನ್ನು ವಿಳಂಬವಿಲ್ಲದೆ ನೀಡುವ ಉದ್ದೇಶದಿಂದ ಮಾತ್ರ ಈ ಬದಲಾವಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

    ಇತರ ದೇಶಗಳಿಗೆ ಹೋಗುವವರಿಗೆ ಕೊರೊನಾ ಪರೀಕ್ಷಾ ವರದಿಗಳು ಕಡ್ಡಾಯವಾಗಿದೆ. ಈ ಜನರು ಸರದಿಯಲ್ಲಿ ನಿಂತು ಕಾಯಬೇಕಾದ ಸ್ಥಿತಿ ಬಂದೊದಗಿತ್ತು. ಈ ಹಿನ್ನೆಲೆ ಬದಲಾವಣೆ ತರಲಾಗಿದೆ. ಈ ರೀತಿ ವಿದೇಶ ಪ್ರಯಾಣ ನಡೆಸುವವರು, ಕೊರೊನಾ ಸೋಂಕು ವರದಿ ತೀರಾ ಅಗತ್ಯವಿರುವವರು ಖಾಸಗಿ ಆಸ್ಪತ್ರೆಗಳ ಮೂಲಕ ವರದಿಯನ್ನು ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ದಿನಕ್ಕೆ ಸರಾಸರಿ 1,500 ರಿಂದ 2,000 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಈ ಬಾರಿ ಅದು 4,500 ಕ್ಕೆ ಏರಿದೆ. ಈಗ ಎಂಟು ಖಾಸಗಿ ಲ್ಯಾಬ್‌ಗಳಿವೆ ಹಾಗೂ ವೆನ್ಲಾಕ್ ಪ್ರತಿದಿನ 2,200 ಮಂದಿಯ ಪರೀಕ್ಷೆ ನಡೆಸುತ್ತಿದೆ.

    ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್ ಕುಮಾರ್, ”ಸಾಮೂಹಿಕವಾಗಿ ಕೊರೊನಾ ಪರೀಕ್ಷೆ ನಡೆಸುವುದು ಅನಗತ್ಯ. ಇದರಿಂದಾಗಿ ಯಾವುದೇ ಉದ್ದೇಶ ಸಾಧಿಸಲಾಗದು. ಜನರು ಅನಗತ್ಯವಾಗಿ ಕೊರೊನಾ ಪರೀಕ್ಷೆಗೆ ಒಳಪಡುವ ಮೂಲಕ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೇರುತ್ತಿದ್ದಾರೆ. ಈ ಹಿನ್ನೆಲೆ ಕೊರೊನಾ ರೋಗಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು

    Latest Posts

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು

    ಸುಳ್ಯ: ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ(4) ವಿದ್ಯುತ್...

    ವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ, ಮೂವರು ಅರೆಸ್ಟ್

    ವಿಟ್ಲ:ಅಕ್ರಮ ಮಾದಕವಸ್ತುಗಳ ಸಾಗಾಟದ ವೇಳೆ ಕಾರ್ಯಾಚರಣೆ ನಡೆಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಜಲಲೂದ್ಧಿನ್, ಪೈಝಲ್ ಎಂದು ಗುರುತಿಸಲಾಗಿದೆ

    Breaking News ನೂಪೂರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಮೆಡಿಕಲ್ ಶಾಪ್ ಮಾಲೀಕನ ಕೊಲೆ

    ಅಮರಾವತಿ : ದೇಶದಲ್ಲಿ ಸಂಚಲನ ಸೃಷ್ಟಿಸಿದ ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಮೊನ್ನೆಯಷ್ಟೆ ಉದಯಪುರದಲ್ಲಿ ಟೈಲರ್ ಓರ್ವನ ಶಿರಚ್ಚೇಧನವಾಗಿದೆ. ಸದ್ಯ ನೂಪುರ್ ಶರ್ಮಾ ಬೆಂಬಲಿಸಿದಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಮತ್ತೊಂದು ಹತ್ಯೆಯಾಗಿದೆ...

    ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ ಪ್ರದರ್ಶನ

    ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಮಾನವ ರಹಿತ ವೈಮಾನಿಕ ವಾಹನಗಳ ಅಭಿವೃದ್ಧಿಲಿ ಪ್ರಮುಖ ದಾಪುಗಾಲಿಟ್ಟಿದೆ. ಡಿಆರ್‌ಡಿಒ ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಮೊದಲ...

    Don't Miss

    KSRTCಯಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ :ಬಸ್ ಪಾಸ್ ಅವಧಿ ವಿಸ್ತರಣೆ

    ಬೆಂಗಳೂರು: 2021-22ನೇ ಸಾಲಿನ ಪದವಿ, ವೃತ್ತಿಪರ ಕೋರ್ಸ್, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಈಗಾಗಲೇ ವಿತರಿಸಿರುವಂತ ವಿದ್ಯಾರ್ಥಿ ಉಚಿತ, ರಿಯಾಯಿತಿ ಬಸ್ ಪಾಸ್ ಅವಧಿಯ ನಂತ್ರವೂ, ಪರೀಕ್ಷೆ ನಿಗದಿ ಪಡಿಸಲಾಗಿದೆ. ಈ...

    ಮಂಗಳೂರು: ಪಂಪ್‌ವೆಲ್‌ನಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ರಸ್ತೆ ಸಂಚಾರಕ್ಕೆ ಅಡಚಣೆ

    ಮಂಗಳೂರು: 5 ದಶಕಕ್ಕೂ ಹಳೆಯದಾದ ನೀರಿನ ಪೈಪ್‌ ಭೂಮಿಯ ಆಳದಲ್ಲಿ ಒಡೆದು ಹೋಗಿ ರಸ್ತೆ ಕುಸಿದ ಘಟನೆ ನಗರದ ಕಂಕನಾಡಿಯ ಪಂಪ್‌ವೆಲ್‌ ಜಂಕ್ಷನ್‌ ಬಳಿ ಮಧ್ಯಾಹ್ನ ವೇಳೆ ನಡೆದಿದೆ.

    ಒಲಂಪಿಕ್ ಹಾಗೂ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ ನಿಧನ

    ನವದೆಹಲಿ: ಒಲಂಪಿಕ್ ಹಾಗೂ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ (75) ಇಂದು ಬೆಳಿಗ್ಗೆ ಜಲಂಧರ್ ನಲ್ಲಿ ನಿಧನರಾದರು. 70 ರ ದಶಕಗಳಲ್ಲಿ ವರಿಂದರ್...

    ಉತ್ತಮ ಆರೋಗ್ಯಕ್ಕಾಗಿ ಬ್ರೌನ್‌ ರೈಸ್‌ ಸೇವಿಸಿ, ಅನೇಕ ಕಾಯಿಲೆಗಳನ್ನೂ ದೂರವಿಡಬಲ್ಲ ಆಹಾರವಿದು

    ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಕ್ಕಿಯನ್ನು ಜಾಸ್ತಿ ಬಳಸಬಾರದು ಅನ್ನೋ ಚರ್ಚೆಗಳನ್ನು ಸಾಕಷ್ಟು ಕೇಳಿದ್ದೇವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಬ್ರೌನ್ ರೈಸ್ ನಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಬ್ರೌನ್‌ ರೈಸ್‌...

    ಮಂಗಳೂರು: ಸಿಎನ್‍ಜಿ ಬೆಲೆ ಇಳಿಕೆಗೆ ಕೋರಿ ಮನವಿ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

    ಮಂಗಳೂರು:ಪರಿಸರ ಸ್ನೇಹಿ ಇಂಧನ ಸಿಎನ್‍ಜಿಯ ಬೆಲೆಯನ್ನು ಆದಷ್ಟು ಇಳಿಕೆ ಮಾಡುವಂತೆ ಕೋರಿ ದಕ್ಷಿಣ ಕನ್ನಡದ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾಧಿಕಾರಿಯವರ ಕಚೇರಿಯಿಂದ ಪತ್ರ ಮುಖೇನ ಸಂಬಂಧಿಸಿದ ಕಾರ್ಪೋರೇಟ್ ಕಚೇರಿಗೆ ಮನವಿ...