ಮಂಗಳೂರು ; ಮಂಗಳೂರಿನ ಬಲ್ಮಠ ರೋಡ್ ಸಮೀಪ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ವೇಳೆ ಭೂಕುಸಿತವಾಗಿ ಇಬ್ಬರು ಕಾರ್ಮಿಕರ ಪೈಕಿ ಓರ್ವ ಸಾವನ್ನಪ್ಪಿದ್ದರು, ಮತ್ತೊಬ್ಬ ಪಾರಾಗಿದ್ದಾರೆ. ಸದ್ಯ ದುರಂತದಿಂದ ಎಚ್ಚೆತ್ತಿರುವ ಮಂಗಳೂರು ಮಹಾನಗರ ಪಾಲಿಕೆ ಮಳೆಗಾಲ ಮುಕ್ತಾಯದವರೆಗೆ ಯಾವುದೇ ಕಟ್ಟಡ ಕಾಮಗಾರಿ ನಡೆಸದಂತೆ ಆಯುಕ್ತ ಆನಂದ್ ಸಿ.ಎಲ್ ಆದೇಶಿಸಿದ್ದಾರೆ.
ಈ ಬಾರಿ ಮಂಗಳೂರು ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಳೆದ 15 ದಿನಗಳಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಆದರೆ ಈ ಸಾವಿಗೆ ನೇರ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡತಳಿತ ನೇರ ಹೊಣೆ ಯಾಕೆಂದರೆ ಜಿಲ್ಲಾಡಳಿತ ಮಳೆಗಾಲ ಪೂರ್ವ ನಿಯೋಜಿತ ಕೆಲಸಕಾರ್ಯ ಮಾಡದೆ ಇರುವುದು ಈ ಸಾವಿಗೆ ಮುಖ್ಯ ಕಾರಣ. ಪ್ರಸ್ತುತ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗುವ ಸಾಧ್ಯತೆಗಳೊಂದಿಗೆ ರೆಡ್, ಆರೆಂಜ್, ಎಲ್ಲೊ ಅಲರ್ಟ್ ಬಗ್ಗೆ ಹವಮಾನ ಇಲಾಖೆಯಿಂದ ನಿರಂತರವಾಗಿ ಮುನ್ಸೂಚನೆ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಕಟ್ಟಡದ ಕಾಮಗಾರಿಯನ್ನು ಮಳೆಗಾಲ ಮುಕ್ತಾಯವಾಗುವವರೆಗೆ ನಡೆಸದಂತೆ ತಿಳಿಸಲಾಗಿದೆ.
ಸುಮಾರು 40 ಅಡಿಯಷ್ಟು ಗುಂಡಿ ತೋಡಿದ್ದು, ಸುತ್ತಲೂ ಕಾಂಕ್ರೀಟ್ ತಡೆಗೋಡೆ ನಿರ್ಮಾಣವಾಗಿದೆ. ಮಧ್ಯಾಹ್ನ 12.30ರ ಸುಮಾರು. ಇದೇ ತಡೆಗೋಡೆಗೆ ಬಿಹಾರ ಮೂಲದ ರಾಜ್ಕುಮಾರ್, ಉತ್ತರ ಪ್ರದೇಶ ಮೂಲದ ಚಂದನ್ ವಾಟರ್ ಪ್ರೂಫ್ ಕೆಮಿಕಲ್ ಬಳೀತಿದ್ರು. ಈ ವೇಳೆ ಏಕಾಏಕಿ ಕಾರ್ಮಿಕರ ಮೇಲೆ ಮಣ್ಣು ಕುಸಿದಿತ್ತು. 4-5 ದಿನದಿಂದ ಸುರಿಯುತ್ತಿರುವ ಮಳೆಯಿಂದ ಮಣ್ಣು ಸಡಿಲಗೊಂಡು ದುರಂತ ಸಂಭವಿಸಿತ್ತು.
ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕ ಸಿಬ್ಬಂದಿ ಸತತ 2 ಗಂಟೆಗಳ ಕಾಲ ಹರಸಾಹಸ ಪಟ್ಟು ಓರ್ವ ಕಾರ್ಮಿಕರ ಜೀವ ಉಳಿಸಿದ್ದರು. ಅರೆ ಪ್ರಜ್ಞೆಯಲ್ಲಿದ್ದ ಬಿಹಾರ ಮೂಲದ ಕಾರ್ಮಿಕ ರಾಜಕುಮಾರ್ನ ರಕ್ಷಣೆ ಮಾಡಿ, ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಆದರೆ ಸತತ ಆರು ಗಂಟೆ ಕಾರ್ಯಚರಣೆ ಮಾಡಿದರೂ ಚಂದನ್ನನ್ನು ರಕ್ಷಣೆ ಮಾಡಲಾಗಿಲ್ಲ.ಒಟ್ಟಿನಲ್ಲಿ ಬೇರೆ ಬೇರೆ ರಾಜ್ಯದಿಂದ ಹೊಟ್ಟೆಪಾಡಿಗಾಗಿ ಬರುವ ಬಡ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ