ಬಂಟ್ವಾಳ : ಟ್ಯಾಂಕರ್ ಚಾಲಕನೋರ್ವನ ಮೇಲೆ ಹಲ್ಲೆ ನಡೆಸಿ ಆರೋಪಿ ಪರಾರಿಯಾದ ಘಟನೆ ಬ್ರಹ್ಮರಕೋಟ್ಲು ಟೋಲ್ ಗೇಟ್ ಸಮೀಪ ಶುಕ್ರವಾರ ಸಂಜೆ ವೇಳೆ ನಡೆದಿದೆ.
ಕುಲಶೇಖರ ನಿವಾಸಿ ಜಾರ್ಜ್ ರೋಡ್ರಿಗಸ್ ಎಂಬವರ ಮೇಲೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಹಲ್ಲೆ ನಡೆಸಿ ಅವ್ಯಾಚ್ಚ ಶಬ್ದಗಳಿಂದ ಬೈದು ಪರಾರಿಯಾಗಿದ್ದಾನೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಂಗಳೂರಿನಲ್ಲಿರುವ ವಿನಿತ್ ಕುಮಾರ ಜಲನ್ ರವರ ಕಂಪನಿಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿರುವ ರೋಡ್ರಿಗಸ್ ಅವರು ಜೂನ್ 10 ರಂಧು ಕೊಯಮುತ್ತೂರಿನಿಂದ ಹೊರಟು ಈ ದಿನ ಜೂನ್ 11 ರಂದು ಸಂಜೆ 17.10 ಗಂಟೆಗೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಬ್ರಹ್ಮರ ಕೋಟ್ಲು ಟೋಲ್ ಗೇಟ್ ಎಂಬಲ್ಲಿ KA 20 D 5298 ನೇದರ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಲಾರಿಯ ಹಿಂದಿನಿಂದ ಆಕ್ಟಿವಾ ಸ್ಕೂಟರ್ ನಲ್ಲಿ ಬಂದ ಒಬ್ಬ ಯುವಕ ಟ್ಯಾಂಕರ್ ಲಾರಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಚಾಲಕ ಶೀಟಿನಲ್ಲಿದ್ದ ರೋಡ್ರಿಗಸ್ ಅವರ ಶರ್ಟಿನ್ ಕಾಲರ್ ಹಿಡಿದು ಕೆಳಗೆ ಎಳೆದು ದೂಡಿ ಹಾಕಿರುತ್ತಾನೆ.
ದೂಡಿ ಹಾಕಿ ಹಲ್ಲೆ ನಡೆಸಿದ ಪರಿಣಾಮ ರೋಡ್ರಿಗಸ್ ಅವರ ಕೊರಳಿನಲ್ಲಿನ ಜಪ ಮಾಲೆ ಹಾಗೂ ಕೀಸೆಯಲ್ಲಿನ ಡಿ ಎಲ್, 2 ಸಾವಿರ ರೂ ಕೆಳಗೆ ಬಿದ್ದಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾಗೂ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್, ಅಪರಾಧ ವಿಭಾಗದ ಎಸ್ಐ.ಕಲೈಮಾರ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ