Sunday, September 15, 2024
spot_img
More

    Latest Posts

    ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಸಾಕಿದ್ದ ಪ್ರೀತಿಯ ನಾಯಿ ಅಸೌಖ್ಯದಿಂದ ನಿಧನ

    ಬೆಳ್ಳಾರೆ: ಬಿಜೆಪಿ ಯುವ ಮೋರ್ಚಾ ನಾಯಕ ಹಾಗೂ ಹಿಂದೂ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ದುಷ್ಕರ್ಮಿಗಳಿಂದ ಹತ್ಯೆಯಾಗಿ ಇನ್ನೂ ಒಂದು ತಿಂಗಳಾಗಿಲ್ಲ. ಈ ನಡುವೆ ಆ ಮನೆಯಲ್ಲಿ ಸಾಕಿದ್ದ ನಾಯಿ ಮೃತಪಟ್ಟಿದೆ.

    ಪ್ರವೀಣ್ ನೆಟ್ಟಾರ್ ಪ್ರಾಣಿ ಪ್ರಿಯರಾಗಿದ್ದರು. ಮೂಕ ಪ್ರಾಣಿಗಳ ನೋವಿಗೆ ಸ್ಪಂದಿಸುವ ಗುಣ ಹೊಂದಿದ್ದರು. ಅಂತಹ ಪ್ರವೀಣ್ ತಮ್ಮ ಮನೆಯಲ್ಲಿ ಶ್ವಾನವೊಂದನ್ನು ಸಾಕಿದ್ದರು. ಅತ್ಯಂತ ಅಕ್ಕರೆಯಿಂದ ಸಾಕಿದ್ದ ಶ್ವಾನ ಇದೀಗ ಮೃತಪಟ್ಟಿದೆ. ಪ್ರವೀಣ್ ನಿಧನದ ಬಳಿಕ ಕಳೆದ ಕೆಲವು ದಿನಗಳಿಂದ ಈ ಶ್ವಾನ ಅನಾರೋಗ್ಯದಿಂದ ನರಳುತ್ತಿತ್ತು ಎನ್ನಲಾಗುತ್ತಿದೆ. ಇದೀಗ ಆ ಶ್ವಾನ ಸಾವನ್ನಪ್ಪಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬಿಲ್ಲವೆರ್ ಪೇಜ್ ನಲ್ಲಿ ಪ್ರಕಟಿಸಲಾಗಿದೆ.

    ಪ್ರವೀಣ್ ಹತ್ಯೆಗೀಡಾವುದಕ್ಕೂ ಕೆಲವೇ ದಿನಗಳ ಹಿಂದೆ ಬೀದಿಯಲ್ಲಿದ್ದ ಎರಡು ನಾಯಿ ಮರಿಗಳನ್ನು ರಕ್ಷಿಸಿದ್ದರು. ಈ ಕುರಿತಂತೆ ಅವರೇ ಜಾಲತಾಣದಲ್ಲಿ ಫೋಟೋ ಸಹಿತ ಮಾಹಿತಿ ಪ್ರಕಟಿಸಿದ್ದರು. ಒಂದು ಜೀವ ಉಳಿಸಿದ ಸಾರ್ಥಕತೆ ಎಂದು ಹೇಳಿಕೊಂಡಿದ್ದರು. ಪ್ರಾಣಿಗಳ ಮೇಲೆ ಪ್ರವೀಣ್ ಅವರಿಗೆ ಅಷ್ಟೊಂದು ಪ್ರೀತಿ ಇತ್ತು ಎನ್ನುವುದು ಇದರಿಂದ ತಿಳಿಯಬಹುದಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss