ಬೆಳ್ತಂಗಡಿ: ಕಕ್ಕಿಂಜೆ ತೋಟತ್ತಾಡಿ ಸನಿಹದ ಬೆಂದ್ರಾಳ ನಿವಾಸಿ ಉದ್ಯಮಿ ಸುದರ್ಶನ್ ಅಲಿಯಾಸ್ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಬಂಧಿಸಲಾಗಿದೆ.
ಸುದರ್ಶನ್ ಅಲಿಯಾಸ್ ಹರ್ಷ ಅವರನ್ನು ಶಿರಸಿ ಬಳಿ ಅಪಘಾತ ಮಾಡಿ ಬಳಿಕ ತಲ್ವಾರ್ ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಎಂಬಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿ ಪರಾರಿಯಾಗಿತ್ತು.
ಉತ್ತರ ಕನ್ನಡದ ಮುಂಡಗೋಡ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು ರವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಪ್ರಭುಗೌಡ ಡಿ.ಕೆ ಪಿ.ಐ ಮುಂಡಗೋಡ ಹಾಗೂ ತಂಡವು ಆರೋಪಿಗಳಾದ ಮಂಜುನಾಥ, ಕಿರಣ, ಮಲ್ಲಿಕಾರ್ಜುನ್ ನನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎಸ್ಕ್ರಾಸ್ ಕಾರು, ಕೊಲೆ ಮಾಡಲು ಬಳಸಿದ ಕಬ್ಬಿಣದ ಪೈಪಿನಂತಿರುವ ರಾಡ್ ಹಾಗೂ ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಇತರ ಆರೋಪಿಗಳಾದ ಶಬ್ಬೀರ್ ಹಾಗೂ ಹಜರತ್ಲಿ ಎಂಬವರು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ