ಉಡುಪಿ : ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಪ್ರಸ್ತುತ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ವೀಕ್ಷಕರು
ಈ ಅಪರೂಪದ ಸಮಾಜ ಸೇವಕರು ಕೊರೊನಾ ಸಮಯದಲ್ಲಿ ನೂರಾರು ಕುಟುಂಬಗಳಿಗೆ ಆಶ್ರಯ ನೀಡಿದ್ದು , ಹಸಿದ ಜೀವಗಳಿಗೆ ಊಟ ನೀಡಿ ,ನೊಂದು ಸೋತ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿದ್ದು ನೂರಾರು ಹೆಣಗಳಿಗೆ ಹೆಗಲು ನೀಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ಬ್ಯಾಗ್ ನೀಡುತ್ತಾ ಅಧಿಕಾರ ಇರಲಿ ಬಿಡಲಿ ಇವರು ತಮ್ಮ ಸ್ವಂತ ಹಣದಿಂದ ಖರ್ಚು ಮಾಡಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿರುವುದು ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯ.ಎಲೆ ಮರೆಯ ಕಾಯಿಯಂತೆ ತಾನು ಮಾಡುವ ಕೆಲಸದಲ್ಲಿ ಆತ್ಮತೃಪ್ತಿಯನ್ನು ಕಾಣುತ್ತಾ ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಕಷ್ಟ ನೋವುಗಳಿಗೆ ಸದಾ ಸ್ಪಂದಿಸುವ ಅಪರೂಪದ ವ್ಯಕ್ತಿತ್ವ ಇವರದ್ದು .ಅಂದ ಹಾಗೇ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ಗ್ರಾಮದ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿಯಲ್ಲಿರುವ ಡೇಂಜರ್ ಝೂನ್ ಎಂದು ಕರೆಯಲಾಗುವ ರಸ್ತೆಯು ಹಲವಾರು ಅಪಘಾತಕ್ಕೆ ಕಾರಣವಾಗಿತ್ತು. ಪ್ರತಿ ನಿತ್ಯವೂ ಸಂಚರಿಸುವ ವಾಹನ ಸವಾರರಿಗೆ ಭಯದ ವಾತಾವರಣ ನಿರ್ಮಿಸಿತ್ತು ಇದನ್ನು ಗಮನಿಸಿದ ಫ್ರ್ಯಾಂಕಿ ಡಿಸೋಜರವರು ಪಿ.ಡಬ್ಲ್ಯೂ ಅಧಿಕಾರಿ ಶ್ರೀ ಗಿರೀಶ್ ಅವರ ಬಳಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲು ಮನವಿಯನ್ನು ಮಾಡಿದ್ದರು. ಮನವಿಗೆ ಕೂಡಲೇ ಸ್ಪಂದಿಸಿದ ಅಧಿಕಾರಿಯು ಇಂದು ತಮ್ಮ ಸಿಬ್ಬಂದಿಗಳ ಮುಖೇನ ರಸ್ತೆಗೆ ಸೂಕ್ತವಾದ ಸ್ಪೀಡ್ ಬ್ರೇಕರ್ ಮತ್ತು ಫಲಕಗಳನ್ನು ಹಾಕಿದರು.ಇದೊಂದು ಸಮಾಜಮುಖಿ ಸೇವೆಯಾಗಿದ್ದು ಫ್ರ್ಯಾಂಕಿ ಡಿಸೋಜರವರಿಗೆ ಇನ್ನಷ್ಟು ಒಳ್ಳೆಯ ಕೆಲಸವನ್ನು ಮಾಡುವಂತೆ ದೇವರು ಅನುಗ್ರಹಿಸಲಿ. ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕವು ನೂರಾರು ಸಮಾಜಿಕ ಸೇವೆಯನ್ನು ಸದಾಕಾಲವೂ ಮಾಡುತ್ತಾ ಜನಮನ್ನಣೆ ಪಡೆದಿರುವುದು ಹೆಮ್ಮೆಯ ಸಂಗತಿ. ಈ ಸಮಯದಲ್ಲಿ ತುರವೇ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಶ್ರೀ ರೋಶನ್ ಬಂಗೇರಾ ,ತುಳುನಾಡ ರಕ್ಷಣಾ ವೇದಿಕೆಯ ಮುಖಂಡ ರಿಚರ್ಡ್ ಸಂತೆಕಟ್ಟೆ , ಶ್ರೀ ನಿತೀನ್ ಸಲ್ಮಾರ, ಶ್ರೀ ರಾಹುಲ್ ಸಲ್ಮಾರ ಉಪಸ್ಥಿತರಿದ್ದರು.
©2021 Tulunada Surya | Developed by CuriousLabs