ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶಕ್ಕಾಗಿ ಇಡೀ ದೇಶ ಕಾತರದಿಂದ ಕಾಯುತ್ತಿದೆ. ಸದ್ಯದ ಅಂಕಿ ಅಂಶಗಳ ಪ್ರಕಾರ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಮತ್ತೆ ಅಧಿಕಾರಕ್ಕೇರುವುದು ನಿಶ್ಚಿತ. ಆದರೆ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಲಿದೆ ಎಂಬುದೂ ಸ್ಪಷ್ಟ.
ಸದ್ಯದ ಅಂಕಿ ಅಂಶಗಳ ಪ್ರಕಾರ ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕಿ, 292 ಕ್ಷೇತ್ರಗಳ ಮುನ್ನಡೆ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಆಡಳಿತಾರೂಢ ಟಿಎಂಸಿ 203 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ 40 ಕ್ಷೇತ್ರಗಳಲ್ಲಿ ಟಿಎಂಸಿ ಹಿನ್ನಡೆ ಅನುಭವಿಸುತ್ತಿದೆ.
ಅದರಂತೆ ಬಿಜೆಪಿ ಒಟ್ಟು 86 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ರಾಜ್ಯದಲ್ಲಿ ಈ ಬಾರಿ 100 ಕ್ಷೇತ್ರಗಳಲ್ಲಿ ಕಮಲ ಅರಳುವ ಸಾಧ್ಯತೆ ದಟ್ಟವಾಗಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ‘ಚುನಾವಣಾ ಚಾಣಕ್ಯ’ ಪ್ರಶಾಂತ್ ಕಿಶೋರ್ ಚಿಂತೆಗಿಡಾಗಿದಾರ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಚುನಾವಣಾ ನೀತಿ ನಿರೂಪಕರಾಗಿದ್ದ ಪ್ರಶಾಂತ್ ಕಿಶೋರ್, ಬಂಗಾಳದಲ್ಲಿ ಮತ್ತೆ ಟಿಎಂಸಿ ಅಧಿಕಾರಕ್ಕೆ ಬರಲಿದೆ ಎಂದು ಮೊದಲೇ ಭವಿಷ್ಯ ನುಡಿದಿದ್ದರು. ಅದರಂತೆ ಅವರ ಭವಿಷ್ಯವಾಣಿ ಬಹುತೇಕ ನಿಜ ಸಾಬೀತಾಗಲಿದೆ.
ಆದರೆ ಪ್ರಶಾಂತ್ ಕಿಶೋರ್ ಅವರ ಮತ್ತೊಂದು ಭವಿಷ್ಯ ಅವರಿಗೆ ಕಂಟಕವಾಗುವ ಸಾಧ್ಯತೆ ಕೂಡ ಕಂಡು ಬರುತ್ತಿದೆ. ಹೌದು, ಪ.ಬಂಗಾಳದಲ್ಲಿ ಬಿಜೆಪಿ 100ಗಡಿ ದಾಟುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದರು. ಅಲ್ಲದೇ ಒಂದು ವೇಳೆ ಬಿಜೆಪಿ 100ರ ಗಡಿ ದಾಟಿದರೆ ನಾನು ಚುನಾವಣಾ ನೀತಿ ನಿರೂಪಣೆಯ ನನ್ನ ವೃತ್ತಿಯನ್ನು ತೊರೆಯುತ್ತೇನೆ ಎಂದು ಪ್ರಶಾಂತ್ ಕಿಶೋರ್ ಸವಾಲು ಹಾಕಿದ್ದರು.
ಆದರೆ ಸದ್ಯದ ಅಂಕಿ ಅಂಶಗಳನ್ನು ನೋಡುವುದಾದರೆ ಬಂಗಾಳದಲ್ಲಿ ಬಿಜೆಪಿ 100ರ ಗಡಿ ದಾಟಲಿದೆ ಎನ್ನಲಾಗುತ್ತಿದ್ದು, ಇದು ಪ್ರಶಾಂತ್ ಕಿಶೋರ್ ಅವರ ಎದೆಬಡಿತವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಕ್ಕಿಲ್ಲ.
ಆದರೆ ಬಿಜೆಪಿ ಸದ್ಯ ಕೇವಲ 86 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಅಂಂತಿಮವಾಗಿ 100ರ ಗಡಿ ದಾಟಲು ಇನ್ನೂ ಭಾರೀ ಕಸರತ್ತು ನಡೆಸಬೇಕಿದೆ.ಆದರೂ ಪ್ರಶಾಂತ್ ಕಿಶೋರ್ ಸದ್ಯದ ಅಂಕಿ ಅಂಶಗಳನ್ನು ನೋಡಿ ತುಸು ಗಲಿಬಿಲಿಗೊಳ್ಳುದು ಸುಳ್ಳಲ್ಲ.
ಆದರೆ ಅಂತಿಮ ಫಲಿತಾಂಶ ಬಂದ ಬಳಿಕವೇ ಪ್ರಶಾಂತ್ ಕಿಶೋರ್ ಅವರ ಚುನಾವಣಾ ನೀತಿ ನಿರೂಪಣೆಯ ವೃತ್ತಿ ಭವಿಷ್ಯ ಏನಾಗಲಿದೆ ಎಂಬುದು ಸ್ಪಷ್ಟವಾಗಲಿದೆ
©2021 Tulunada Surya | Developed by CuriousLabs