ಹನೂರು : ತಾಲೂಕು ಆರೋಗ್ಯ ಅಧಿಕಾರಿಗಳ ತಂಡ ಮಲೆ ಮಹದೇಶ್ವರಬೆಟ್ಟಕ್ಕೆ ಬುಧವಾರ ಭೇಟಿ ನೀಡಿ ನಿಯಮ ಉಲ್ಲಂಘಸಿ ತಂಬಾಕು ಉತ್ಪನ್ನ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಭೇಟಿ ಕೊಟ್ಟು ದಂಡ ವಿಧಿಸಿ ಕಾರ್ಯಚರಣೆ ನೆಡೆಸಿದ್ದಾರೆ.
ಮಹದೇಶ್ವರಬೆಟ್ಟದ ಬಸ್ ನಿಲ್ದಾಣ ಸೇರಿದಂತೆ ತಪೋಭವನ ರಸ್ತೆ, ತಂಬಡಿಗೆರಿ, ಸಾಲೂರುಮಠ, ದೇವಸ್ಥಾನ ಹಾಗೂ ಮುಖ್ಯ ರಸ್ತೆಗಳಲ್ಲಿರುವ ಹೋಟೆಲ್ ಅಂಗಡಿಗಳನ್ನು ತಾಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ನೇತೃತ್ವದ ತಂಡ ಪರಿಶೀಲನೆ ನೆಡೆಸಿ ದಾಳಿ ನೆಡೆಸಿದರು ಈ ವೇಳೆ 60 ಪ್ರಕರಣಗಳಿಗೆ 15,400ರೂ. ದಂಡ ವಿಧಿಸಿ ಕ್ರಮಕೈಗೊಂಡಿದ್ದಾರೆ.
ಬಳಿಕ ಡಾ.ಪ್ರಕಾಶ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ, ಹೋಟೆಲ್ ಸೇರಿದಂತೆ ಚಿಲ್ಲರೆ ಅಂಗಡಿ, ಟೀ ಸ್ಟಾಲ್ ಗಳಲ್ಲಿ ಯಾವುದೇ ರೀತಿಯ ಎಚ್ಚರಿಕೆಯ ನಾಮಫಲಕ ಅಳವಡಿಸಿಲ್ಲ ಹೀಗಾಗಿ ನಿಯಮ ಉಲ್ಲಂಘನೆ ಮಾಡಿದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗಿದೆ ಎಂದರಲ್ಲದೆ ಧೂಮಪಾನ (ಸಿಗರೇಟ್ ) ಹಾಗೂ ಇನ್ನಿತರ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ದಾಳಿ ಮಾಡಲಾಗಿ ಎಚ್ಚರಿಕೆ ಜೊತೆಗೆ ತಂಬಾಕು ನಿಯಂತ್ರಣ ಕಾಯ್ದೆ ಹಾಗೂ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಬಗ್ಗೆ ಮೂಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎ.ಎಸ್.ಐ ಮಾದಪ್ಪ ಸೇರಿದಂತೆ ಅರೋಗ್ಯ ಇಲಾಖೆ ಸಿಬ್ಬಂದಿ ಮತ್ತಿತರರು ಇದ್ದರು.