ಚಲನಚಿತ್ರ ಧರ್ಮ ದೈವದ ಚಿತ್ರತಂಡ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಗೆ ಆಗಮಿಸಿತು ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜಾ ಕೊಳಲಗಿರಿ, ಜಿಲ್ಲಾ ಅಧ್ಯಕ್ಷ ಕೃಷ್ಣಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮೀನಗರ, ಕಾರ್ಮಿಕ ಜಿಲ್ಲಾ ಉಪಾಧ್ಯಕ್ಷ ಕುಶಾಲ್ ಅಮೀನ್, ಕಾರ್ಮಿಕ ಘಟಕ ಮುಖಂಡ ಮಜಿದ್ ಸೇರಿದಂತೆ ಮತ್ತಿತರ ಪ್ರಮುಖ ಪದಾಧಿಕಾರಿಗಳು ಆಗಮಿಸಿದ್ದ ಚಿತ್ರತಂಡದ ನಿರ್ದೇಶಕ, ನಾಯಕ ನಟ, ಮತ್ತಿತರ ಪ್ರಮುಖ ಕಲಾವಿದರಿಗೆ ಶಾಲು ಹಾಕಿ ಗೌರವಿಸಿ ಶುಭಹಾರೈಸಿದರು. ಈ ಸಂದರ್ಭ ಉದ್ಯಮಿ ಹಾಗೂ ತುಳು ಸಂಸ್ಕೃತಿ ಸಂಘಟನೆ ಪ್ರೋತ್ಸಾಹಕ ಚಿತ್ತರಂಜನ್ ಶೆಟ್ಟಿ ಚಲನಚಿತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕ
ಬಿಳಿಯಾರು ರಾಕೇಶ್ ಭೋಜರಾಜ ಶೆಟ್ಟಿ, ಚಿತ್ರ ತಂಡದ ಭರತ್ ಶೆಟ್ಟಿ, ಕೌಶಿಕ್ ರೈ ಕುಂಜಾಡಿ, ಸುಧೀರ್ ಕುಮಾರ್ ಕಲ್ಲಡ್ಕ, ಧನುಷ್ ಚಿತ್ರ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ರಮೇಶ್ ರೈ ಕುಕ್ಕುವಳ್ಳಿ, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ರೂಪಾ ವರ್ಕಡಿ, ಪುಷ್ಪರಾಜ್ ಬೊಲ್ಲರ್, ದಯಾನಂದ ರೈ, ರಂಜನ್ ಬೋಳೂರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು , ಬೆಳ್ಳಿಪರದೆ ಮೇಲೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಪ್ರತಿಯೊಬ್ಬ ತುಳುವರು ನೋಡಿ ಪ್ರೋತ್ಸಾಹಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜ ಕೊಳಲಗಿರಿ ಮನವಿ ಮಾಡಿದರು.
©2021 Tulunada Surya | Developed by CuriousLabs