ಮಂಗಳೂರು: ತುಳು ಧ್ವಜಕ್ಕೆ ಅವಮಾನ ಮಾಡಿದ ಆರೋಪಿ ಸೂರ್ಯ ಎನ್.ಕೆ. ಎಂಬಾತನನ್ನು ಬೆಂಗಳೂರಿನ ಶ್ರೀರಾಂಪುರ ಒಂದನೇ ಕ್ರಾಸ್‌ನಲ್ಲಿರುವ ಆತನ ಮನೆಯಿಂದ ಶುಕ್ರವಾರ ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದ ಟ್ರೋಲ್ ಪೇಜ್‌ನಲ್ಲಿ ಹಾಕಲಾಗಿದ್ದ ಪೋಸ್ಟ್‌ಗೆ ಸೂರ್ಯ ತುಳುನಾಡಿನ ಧ್ವಜವನ್ನು ಚಪ್ಪಲಿಗೆ ಎಡಿಟ್ ಮಾಡಿ ಅಶ್ಲೀಲ ಬರಹಗಳ ಮೂಲಕ ಸಂದೇಶ ಹಾಕಿ ತುಳುವರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದ ಈ ಬಗ್ಗೆ ಮನಪಾ ಸದಸ್ಯ ಶಶಿಧರ ಹೆಗ್ಡೆ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಬಳಿಕ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ವಿಶೇಷ ತಂಡದಿಂದ ಬಂಧನ: ಪ್ರಕರಣದ ಆರೋಪಿಯನ್ನು ಪತ್ತೆ ಮಾಡಲು ಬರ್ಕೆ ಠಾಣಾ ಪಿಎಸ್‌ಐ ಹಾರುನ್ ಅಖ್ತರ್, ಉರ್ವ ಠಾಣೆ ಸಿಬ್ಬಂದಿ ಪುಷ್ಪರಾಜ್, ಪ್ರಕಾಶ್, ಬರ್ಕೆ ಠಾಣೆ ಕಾನ್‌ಸ್ಟೇಬಲ್ ಶರತ್ ಎಂಬವರನ್ನು ವಿಶೇಷ ಕರ್ತವ್ಯದಲ್ಲಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಆರೋಪಿಯ ಮನೆಯನ್ನು ಪತ್ತೆ ಮಾಡಿ ಬಂಧಿಸಿ, ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ