ದಿನಾಂಕ 6.8.2024. ರಂದು ಬ್ರಹ್ಮವಾರ ಮಿನಿ ವಿಧಾನಸೌಧದಲ್ಲಿ ನಮ್ಮ ಉಡುಪಿಯ ಜನಪ್ರಿಯ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಎನ್ಎಚ್ 66 ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆಗೆ. ರಾಷ್ಟ್ರೀಯ ಹೆದ್ದಾರಿ ರಸ್ತೆಯ ಸಮಸ್ಯೆಗಳ ಸಭೆ ನಡೆದಿತ್ತು. ಮತ್ತು ರಾಷ್ಟ್ರೀಯ ಸೇತುವೆಯ ಮೇಲೆ ಕಸ ಮತ್ತು ಮಣ್ಣು ಮತ್ತು ಇನ್ನಿತರ ವಸ್ತುಗಳು ತುಂಬಿದ್ದರಿಂದ ಮಳೆಯ ನೀರು ಸೇತುವೆ ಮೇಲೆ ನಿಂತು ನೀರು ಸರಗವಾಗಿ ನದಿಗೆ ಬೀಳದಿದ್ದರಿಂದ ವಾಹನ ಸವಾರರಿಗೆ ಮತ್ತು ದ್ವಿಚಕ್ರ ವಾಹನಸವಾರರಿಗೆ ಸಾರ್ವಜನಿಕರಿಗೆ ಬಹಳ ತೊಂದರೆ ಆಗಿದೆ ಎಂದು ಮಾನ್ಯ ಶಾಸಕರ ಮುಂದೆ ಅಧಿಕಾರಿಗಳಿಗೆ ತುಳುನಾಡು ರಕ್ಷಣಾ ವೇದಿಕೆ ಪದಾಧಿಕಾರಿಗಳು ಸಮಸ್ಯೆಯ ತೀವ್ರತೆಯನ್ನು ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ತುರವೇ ಸಂಘಟನೆ ಮನದಟ್ಟು ಮಾಡಿದೆ. ಇಂದು ಗುರುವಾರ ದಿನಾಂಕ 8/08/2024 ಸೇತುವೆಯ ಕಸ ಕಡ್ಡಿ ಮಣ್ಣನ್ನು ಸ್ವಚ್ಛತೆಯನ್ನು ಮಾಡಿದ್ದು. ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಖುಷಿಯ ವಿಚಾರವಾಗಿದೆ. ತುಳುನಾಡ ಸಂಘಟನೆಯ ಹೋರಾಟದ ಫಲಶ್ರುತಿಯಾಗಿದ್ದು. ಮನವಿಗೆ ಕೂಡಲೇ ಸ್ಪಂದಿಸಿದ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣವರಿಗೆ ತುಳುನಾಡ ರಕ್ಷಣಾ ವೇದಿಕೆ ಸಂಘಟನೆಯು ಅಭಿನಂದನೆ ಸಲ್ಲಿಸಿದೆ.
©2021 Tulunada Surya | Developed by CuriousLabs