ಉಡುಪಿ : ದಿನಾಂಕ 10.05.2024 ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕಛೇರಿಯಲ್ಲಿ ಬಸವ ಜಯಂತಿ ಆಚರಣೆ ನಡೆಯಿತು. ಉಡುಪಿ ಜಿಲ್ಲಾ ಅಧ್ಯಕ್ಷರಾದ ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದ್ದರು ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ ಪ್ರಾಸ್ತವಿಕ ಭಾಷಣ ಮಾತನಾಡುತ್ತಾ ಬಸವಣ್ಣನ ಜೀವನ ಚರಿತ್ರೆ ಮತ್ತು ಅವರ ವಚನಗಳ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ, ,ಮಹಿಳಾ ಘಟಕ ಕೋಶಾಧಿಕಾರಿ ಸುನಂದ ಟೀಚರ್, ರೋಷನ್ ಬಂಗೇರ, ನಿರ್ಮಲ ಮತ್ತಿತರರ ಪ್ರಮುಖ ಮುಖಂಡರು ಉಪಸ್ಥಿತರಿದ್ದರು ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಧನ್ಯವಾದ ಅರ್ಪಣೆಗೈದರು
©2021 Tulunada Surya | Developed by CuriousLabs