ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ರವರ ಹುಟ್ಟು ಹಬ್ಬದ ಅಂಗವಾಗಿ ದಿನಾಂಕ 29-10-2024 ರಂದು ಉಡುಪಿ ಜಿಲ್ಲಾ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಿವಿಧೆಡೆ ಹಲವಾರು ಸಾಮಾಜ ಮುಖಿ ಕಾರ್ಯಕ್ರಮ ನಡೆಯುತ್ತಿದ್ದು ಯುವ ಘಟಕ ವತಿಯಿಂದ ಮಂಗಳೂರು ರೆಡ್ ಕ್ರಾಸ್ ಸಂಸ್ಥೆಯಲ್ಲಿ ರಕ್ತದಾನ ಶಿಬಿರ ನಡೆಯಿತು . ಶಿಬಿರವನ್ನು. ಯೋಗೀಶ್ ಶೆಟ್ಟಿ ಜಪ್ಪು ರವರು ಚಾಲನೆ ನೀಡಿದರು.
ಯುವ ಘಟಕ ಅಧ್ಯಕ್ಷ ಹರೀಶ್ ಶೆಟ್ಟಿ ಶಕ್ತಿನಗರ, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ನಗರ ಉಪಾಧ್ಯಕ್ಷ ಕ್ವೀಟಸ್ ಲೋಬೊ, ನಗರ ಪ್ರಧಾನ ಕಾರ್ಯದರ್ಶಿ ಮುನೀರ್ ಮುಕ್ಕಚೇರಿ , ನಗರ ಮಹಿಳಾ ಉಪಾಧ್ಯಕ್ಷೆ ಶಾರದ ಶೆಟ್ಟಿ , ಶೋಭಾ ಶೆಟ್ಟಿ ಪೆರಾರ , ಆಂಬುಲೆನ್ಸ್ ಘಟಕ ಅಧ್ಯಕ್ಷೆ ರಾಧಿಕಾ , ನಗರ ಯುವ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಕುಡುಪು , ಭಾರ್ಗವಿ , ಮೈಸೂರು ಘಟಕ ವೀಕ್ಷಕ ಪ್ರದೀಪ್ ಪ್ರಭಾಕರ್ , ಸುವೈಜ್ ಉಳ್ಳಾಲ, ನಗರ ಸಂಘಟನಾ ಕಾರ್ಯದರ್ಶಿ ಫಾರೂಕ್ ಗೋಲ್ಡನ್, ಮತ್ತಿತರ ಪ್ರಮುಖರು ಭಾಗವಹಿಸಿದ್ದರು