Sunday, July 21, 2024
spot_img
More

    Latest Posts

    ಉಡುಪಿ:ತುಳುನಾಡ ರಕ್ಷಣಾ ವೇದಿಕೆ ಕಾರ್ಮಿಕ ದಿನಾಚರಣೆ ವಿಜ್ಞಾಪನ ಪತ್ರ ಬಿಡುಗಡೆ

    ಉಡುಪಿ : ರವಿವಾರ 21-04-2024 ರಂದು ಸಿಟಿ ಬಸ್ ಸ್ಟ್ಯಾಂಡ್ ಹೋಟೆಲ್ ಕಾಫಿಯ ಹತ್ತಿರ ಅಕ್ಷಯ ಟವರ್ ನಲ್ಲಿ ಕಾರ್ಮಿಕ ದಿನಾಚರಣೆ ಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮ ಜರಗಿತು.

    ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಮಿಕ ಘಟಕ ವತಿಯಿಂದ ದಿನಾಂಕ 01-05-2024 ಬುಧವಾರ ಬೆಳಿಗ್ಗೆ 10:30ಕ್ಕೆ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಹಲವಾರು ಕಾರ್ಮಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿರುವುದು. ಕಾರ್ಮಿಕ ದಿನಾಚರಣೆ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮ ರವಿವಾರ 21-04-2024 ರಂದು ಸಿಟಿ ಬಸ್ ಸ್ಟ್ಯಾಂಡ್ ಹೋಟೆಲ್ ಕಾಫಿಯ ಹತ್ತಿರ ಅಕ್ಷಯ ಟವರ್ ನಲ್ಲಿ ನಡೆಯಿತು. ವಿಜ್ಞಾಪನ ಪತ್ರ ಬಿಡುಗಡೆಯನ್ನು ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷರಾದ ಜಯ ಪೂಜಾರಿ ಲಕ್ಷ್ಮಿ ನಗರ ವಹಿಸಿದ್ದರು. ಉಡುಪಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜಾ ಕೊಳಲಗಿರಿ, ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಕೃಷ್ಣಕುಮಾರ್, ಜಿಲ್ಲಾ ಸಲಹೆಗಾರರಾದ ಸುಧಾಕರ ಅಮಿನ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಬ್ರಹ್ಮಾವರ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಮುಖಂಡರುಗಳಾದ ರೋಷನ್ , ಸುಭಾಷ್ ಸುಧನ್, ಕುಶಲ್ ಅಮೀನ್, ಪ್ರೀತಂ ಡಿಕೋಸ್ಟ ,ಶಾಂಭವಿ , ಗುಣವತಿ ,ಸಾಧನ , ಗುಲಾಬಿ, ಸುಲತ, ಜ್ಯೋತಿ, ಸರಿತಾ, ಅವಿನಾಶ್ ,ಗೋವರ್ಧನ್ ಮತ್ತಿತರರು ಉಪಸ್ಥಿತರಿದ್ದರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss