ಉಳ್ಳಾಲದಲ್ಲಿ ಕಳೆದ 32 ವರ್ಷಗಳಿಂದ ಶಿಕ್ಷಕಿಯಾಗಿ ಮುಖ್ಯೋಪಾಧ್ಯಾಯ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡು ಶಾಲೆ ಮತ್ತು ವಿದ್ಯಾರ್ಥಿಗಳ ಉನ್ನತಿಗಾಗಿ ನಿಸ್ವಾರ್ಥ ಸೇವೆಯನ್ನು ಮಾಡಿ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್ ಪ್ರಶಸ್ತಿ , ಉಳ್ಳಾಲ ವೀರಾಣಿಯ ಅಬ್ಬಕ್ಕ ಸಮಿತಿ ವತಿಯಿಂದ ಉತ್ತಮ ಶಿಕ್ಷಕಿ ಸನ್ಮಾನ ಪಡೆದಿರುವ ಯು. ಜಾನಕಿ ಪುತ್ರನ್ ರವರು ಇದೀಗ ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟೀಚರ್ ಜಾನಕಿ ಪುತ್ರನ್ ರವರಿಗೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರು ಸಂಘಟನೆ ಶಾಲಾ ಹಾಕಿ ಗೌರವಿಸಿರುತ್ತಾರೆ
©2021 Tulunada Surya | Developed by CuriousLabs