ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛತಾ ಅಭಿಯಾನ ನಮ್ಮ ಉಡುಪಿ ಸ್ವಚ್ಛ ಉಡುಪಿ ಅಭಿಯಾನ ನಡೆಯಿತು.
ದಿನಾಂಕ 02.10.2024 ರಂದು ಬೆಳಿಗ್ಗೆ 9:30ಕ್ಕೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ “ನಮ್ಮ ಉಡುಪಿ ಸ್ವಚ್ಛ ಉಡುಪಿ” ಅಭಿಯಾನವನ್ನು ಮಣಿಪಾಲ – ಕೊಳಲಗಿರಿ ಸಂಪರ್ಕಿಸುವ ಶೀಂಬ್ರ ಪರಾರಿ ಸೇತುವೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಚಾಲನೆ ನೀಡಿ ಮಾತನಾಡುತ್ತಾ ಈ ಸೇತುವೆಯ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಕಸಗಳು ತುಂಬಿದ್ದು ಮಣ್ಣು ಮತ್ತು ಹೊಯಿಗೆ ರಾಶಿ ಬಿದ್ದಿದ್ದರಿಂದ ಹಲವಾರು ಅಪಘಾತಗಳು ಸಂಭವಿಸಿದ್ದು ಹಾಗೂ ಈ ಪ್ರದೇಶದಲ್ಲಿ ತಡರಾತ್ರಿಯವರೆಗೂ ಮದ್ಯ ಸೇವನೆ ಅಕ್ರಮಕೂಟ, ಧೂಮಪಾನ ನಡೆಸುವವರ ಬಗ್ಗೆ ನಮ್ಮ ಸಂಘಟನೆಗೆ ದೂರು ಬರುತ್ತಿದ್ದು ಶೀಘ್ರವೇ ಸಿ.ಸಿ ಕ್ಯಾಮೆರಾ ಅಳವಡಿಸುವುದು ಮತ್ತು ದಾರಿದೀಪ ವ್ಯವಸ್ಥೆಯನ್ನು ಮಾಡಬೇಕು ಮತ್ತು ಈ ಸೇತುವೆಯ ಕೆಳಗಡೆ ಪೈಪ್ ಹಾಗೂ ಇತರ ತ್ಯಾಜ್ಯ ವಸ್ತುಗಳು ಶೇಖರಣೆಯಾಗಿದ್ದು ಕೂಡಲೇ ನಗರಸಭೆ ತೆರವುಗೊಳಿಸುವಂತೆ ಅಗ್ರಹಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ನಗರಸಭೆ ಸದಸ್ಯೆ ಅನಿತಾ ಮೇಡಂ ಮಾತನಾಡುತ್ತಾ ತುಳುನಾಡ ರಕ್ಷಣಾ ವೇದಿಕೆಯ ಜನಪರ ಕಾಳಜಿಗೆ ನಗರಸಭೆ ಸದಾ ಸ್ಪಂದನೆ ನೀಡುತ್ತದೆ.ನಮ್ಮ ಉಡುಪಿಯನ್ನು ಸುಂದರವಾಗಿಸೋಣ ಎಂದು ತಿಳಿಸಿದರು. ಕ್ರಿಶ್ಚಿಯನ್ ಯುನಿಟಿ ಪೆರಂಪಳ್ಳಿ ಇದರ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ, ಉಪಾಧ್ಯಕ್ಷ ಗಾಡ್ವಿನ್ ಡಿ ಕೋಸ್ತ ,ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಕೃಷ್ಣ ಕುಮಾರ್ ಜಿಲ್ಲಾ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ ಅವರು ತಮ್ಮ ಅನಿಸಿಕೆ ತಿಳಿಸಿದರು.. ಉಡುಪಿ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಪ್ರಸ್ತಾವಿಕ ಮಾತಿನೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.. ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ , ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಾಲ್ ಅಮೀನ್ ಬೆಂಗ್ರೆ, ಕಾರ್ಮಿಕ ಘಟಕ ಸಂಘಟನಾ ರೋಶನ್ ಬಂಗೇರ, ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್ , ಕಾರ್ಮಿಕ ಘಟಕ ಜೊತೆ ಕಾರ್ಯದರ್ಶಿ ಮಜಿದ್, ಮಹಿಳಾ ಕಾರ್ಯಕಾರಿ ಸದಸ್ಯರಾದ ಜ್ಯೋತಿ, ರವಿಜಾ, ವಿದ್ಯಾರ್ಥಿ ಘಟಕ ಮುಖಂಡ ಅಭಿಷೇಕ್ ಭಾಗವಹಿಸಿದ್ದರು ಗಾಂಧಿ ಜಯಂತಿ ಆಚರಣೆ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಲು ಉಡುಪಿ ನಗರಸಭೆ , ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್ ಸರ್ ಸಹಕರಿಸಿದರು