Sunday, July 21, 2024
spot_img
More

  Latest Posts

  ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಮಹಾವೀರ ಜಯಂತಿ ಆಚರಣೆ

  ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ದಿನಾಂಕ 21.04 20 24 ಸಂಜೆ 3.30ಕ್ಕೆ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಸಿಟಿ ಬಸ್ ಸ್ಟ್ಯಾಂಡ್ ಹೋಟೆಲ್ ಕಾಫಿಯ ಹತ್ತಿರ ಅಕ್ಷಯ ಟವರ್ ನಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪುರವರು ವಹಿಸಿದ್ದರು. ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಕೃಷ್ಣಕುಮಾರ್ ಸ್ವಾಗತಿಸಿದರು .ಭಗವಾನ್ ಮಹಾವೀರ ರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವುದರೊಂದಿಗೆ ಉದ್ಘಾಟಿಸಿದ ಜೈನ್ ಮಿಲನ್ ಅಧ್ಯಕ್ಷೆ ದೀಪ ರಾಜೇಶ್ ಜೈನ್ ರವರು ಉದ್ಘಾಟನಾ ಭಾಷಣ ಮಾಡುತ್ತಾ
  ಮಹಾವೀರರು ಬೋಧಿಸಿದ 5 ತತ್ವಗಳಾದ
  ಅಹಿಂಸೆ:ಜೈನ ಧರ್ಮದಲ್ಲಿ ಅಹಿಂಸೆ
  ಮೂಲಭೂತ ತತ್ವ.ಈ ತತ್ವದ ಪ್ರಕಾರ ಹಿಂಸೆಯಿಂದ ದೂರವಿರಬೇಕು. ಅಪ್ಪಿತಪ್ಪಿಯೂ ಯಾರೊಬ್ಬರನ್ನು (ಪ್ರಾಣಿ, ಪಕ್ಷಿ, ಮನುಷ್ಯ) ನೋಯಿಸಬಾರದು.

  ಸತ್ಯ:ಭಗವಾನ್ ಮಹಾವೀರರ ಎರಡನೇ ತತ್ವ ಸತ್ಯ. ಈ ತತ್ವದಲ್ಲಿ, ಸತ್ಯವನ್ನು ನಿಜವಾದ ಅಂಶವೆಂದು ಪರಿಗಣಿಸಿ ಅದನ್ನೇ ಅನುಸರಿಸಬೇಕು. ಸತ್ಯವನ್ನು ಪಾಲಿಸುವವನು ಬುದ್ಧಿವಂತನೆನಸಿಕೊಳ್ಳುತ್ತಾನೆ ಮತ್ತು ಮರಣವನ್ನೂ ದಾಟುತ್ತಾನೆ.

  ಆಸ್ತೇಯ: ಭಗವಾನ್ ಮಹಾವೀರರ ಮೂರನೇ ತತ್ವ ಆಸ್ತೇಯ ಈ ತತ್ವವು ಇನ್ನೊಬ್ಬರ ಆಸ್ತಿಯನ್ನು ಕದಿಯಬಾರದು. ಅನುಮತಿಯಿಲ್ಲದೆ ಬೇರೆಯವರಿಂದ ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂದು ತಿಳಿಸುತ್ತದೆ.
  ಅಪರಿಗ್ರಹ:ಭಗವಾನ್ ಮಹಾವೀರರ ನಾಲ್ಕನೇ ತತ್ವ ಅಪರಿಗ್ರಹ. ಅಪರಿಗ್ರಹವೆಂದರೆ ಯಾವುದೇ ವಸ್ತುಗಳ ಮೇಲೆ ಹೆಚ್ಚಿನ ವ್ಯಾಮೋಹ ಹೊಂದಬಾರದು. ಅದು ಹಣವಾಗಿರಬಹುದು, ಸಂಪತ್ತಾಗಿರಬಹುದು ಅಥವಾ ವಸ್ತುವೇ ಆಗಿರಬಹುದು. ಈ ತತ್ವವನ್ನು ಅನುಸರಿಸುವುದರಿಂದ ಪ್ರಜ್ಞಾವಂತರಾಗಿ ಲೌಕಿಕ ಮತ್ತು ಇಂದ್ರಿಯ ಸುಖಗಳನ್ನು ತ್ಯಜಿಸುತ್ತಾರೆ.
  ಬ್ರಹ್ಮಚರ್ಯ:ಭಗವಾನ್ ಮಹಾವೀರರ ಕೊನೆಯ ತತ್ವ ಬ್ರಹ್ಮಚರ್ಯ. ಈ ತತ್ವವು ಬ್ರಹ್ಮಚರ್ಯ ಅನುಸರಿಸುವುದನ್ನು ತಿಳಿಸುತ್ತದೆ. ಎಂದು ಮಹಾವೀರರವರ ಆದರ್ಶ ಗುಣಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜಾ ಕೊಳಲಗಿರಿ, ಜಿಲ್ಲಾ ಸಲಹೆಗಾರರಾದ ಸುಧಾಕರ ಅಮಿನ್, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷರಾದ ಜಯ ಪೂಜಾರಿ ಲಕ್ಷ್ಮಿ ನಗರ ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಬ್ರಹ್ಮಾವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಧನ್ಯವಾದ ಅರ್ಪಣೆ ಗೈದರು. ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ರೋಷನ್ , ಸುಭಾಷ್ ಸುಧನ್ , ಕುಶಲ್ ಅಮೀನ್, ಪ್ರೀತಂ ಡಿಕೋಸ್ಟ ,ಶಾಂಭವಿ ಗುಣವತಿ ,ಸಾಧನ , ಗುಲಾಬಿ, ಸುಲತ,
  ಜ್ಯೋತಿ, ಸರಿತಾ, ಅವಿನಾಶ್ ,ಗೋವರ್ಧನ್ ಮತ್ತಿತರರು ಉಪಸ್ಥಿತರಿದ್ದರು

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss