ಉಡುಪಿ: ತುಳುನಾಡ ರಕ್ಷಣಾ ವೇದಿಕೆ (ರಿ.) ವತಿಯಿಂದ ಆ.11ರಂದು ಭಾನುವಾರ ಉಡುಪಿ, ಬನ್ನಂಜೆಯ ಶ್ರೀ ನಾರಾಯಣಗುರು ಶಿವಗಿರಿ ಸಭಾಭವನದಲ್ಲಿ ʻಆಟಿಡೊಂಜಿ ದಿನʼ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಆಶೀರ್ವಚನ ಮತ್ತು ಕಾರ್ಯಕ್ರಮದ ಉದ್ಘಾಟನೆ ಕೇಮಾರು, ಸಾಂದೀಪನಿ ಸಾಧನಾಶ್ರಮದ ಸ್ವಾಮೀಜಿ ಈಶವಿಠಲದಾಸ ಸ್ವಾಮೀಜಿ, ದೊಡ್ಡಣಗುಡ್ಡೆ ಮುಸ್ಲಿಮ್ ಧರ್ಮಗುರು ಮೌಲಾನಾ ಕಾಸಿಮ್ ಸಾದಿ ಮಾಡಲಿದ್ದಾರೆ.
ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್, ಉಡುಪಿ ನಗರಸಭೆ ಕಮಿಷನರ್ ರಾಯಪ್ಪ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.
ಜ್ಯೋತಿಷ್ಯರು, ಪುರೋಹಿತರು ವೇದಮೂರ್ತಿ ಬನ್ನಂಜೆ ಕೇಶವ ಶಾಂತಿ, ಆಪತ್ಭಾಂದವ ಈಶ್ವರ ಮಲ್ಪೆ, ಅಂಬಲಪಾಡಿ, ಸಮಾಜ ಸೇವಕರು ವಿಶುಶೆಟ್ಟಿ, ಸಮಾಜ ಸೇವಕರು ನಿತ್ಯಾನಂದ ಒಳಕಾಡು, ಉಡುಪಿ ಹಿಂದೂ ರುದ್ರ ಭೂಮಿ ಮೇಲ್ವಿಚಾರಕರು ವನಜ ಪೂಜಾರ್ತಿಯವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾ ಘಟಕದ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು.ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜಾ , ಜಿಲ್ಲಾ ಅಧ್ಯಕ್ಷ ಕೃಷ್ಣ ಕುಮಾರ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದೀನ್, ಪ್ರಕಟಣೆಯಲ್ಲಿ ತಿಳಿಸಲಾಗಿದೆ
©2021 Tulunada Surya | Developed by CuriousLabs