ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ದಿನಾಂಕ 05-09-2024 ರಂದು ಬೆಳಗ್ಗೆ 11.00 ಉಡುಪಿ ಜಿಲ್ಲಾ ಕಚೇರಿಯಲ್ಲಿ ಮಾಜಿ ರಾಷ್ಟ್ರಪತಿ ಸರ್ವಫಳ್ಳಿ ರಾಧಕೃಷ್ಣನ್ ರವರ ಹುಟ್ಟು ಹಬ್ಬದ ಅಂಗವಾಗಿ ಬ್ಲೇಡ್ ಕಂಪನಿಗಳ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮುಂದಿನ ದಿನಗಳಲ್ಲಿ ವಿವಿಧ ದಿನಾಂಕಗಳಂದು ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಜನಜಾಗೃತಿ ಸಭೆಗಳನ್ನು ನಡೆಸಲಾಗುವುದು. ಮತ್ತು ಆಯಾ ಪ್ರದೇಶದ ಪೋಲಿಸ್ ಠಾಣೆ ಮತ್ತು ಇತರ ಇಲಾಖೆಗಳಿಗೆ ಮನವಿ ಸಲ್ಲಿಸಲಾಗುವುದು. ಮತ್ತು ಸಾರ್ವಜನಿಕರಿಗೆ ತಮ್ಮ ತಮ್ಮ ಪ್ರದೇಶದಲ್ಲಿ ಆರ್.ಬಿ. ಐ . ಮತ್ತು ಸರ್ಕಾರದ ಅನುಮತಿ ಇಲ್ಲದೆ ಹಣ ಸಂಗ್ರಹಿಸುವ ಸಂಸ್ಥೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸ್ಥಳೀಯ ತುಳುನಾಡ ರಕ್ಷಣಾ ವೇದಿಕೆ ಘಟಕದ ಗಮನ ತರುವಂತೆ ಅಧ್ಯಕ್ಷತೆಯನ್ನು ವಹಿಸಿದ್ದ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರು ಸಭೆಯಲ್ಲಿ ನೆರೆದಿದ್ದವರಿಗೆ ತಿಳಿಸಿದರು .ಜಿಲ್ಲಾ ಅಧ್ಯಕ್ಷ ಕೃಷ್ಣಕುಮಾರ್ ಪ್ರಸ್ತಾವನೆಗೈದರು. ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮಾರ್ಟಿಲ್ .ಎಸ್. ಲೂಯಿಸ್ ಟೀಚರ್ , ಲಕ್ಷ್ಮಿ ಬಾಯಿ ಟೀಚರ್, ಮತ್ತು ಶಾಯಿನ ಟೀಚರ್ ರವರು ಕರಪತ್ರ ಬಿಡುಗಡೆ ಗೊಳಿಸಿದರು. ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಮಣ್ಯ ನಗರ ಕಾರ್ಮಿಕ ಘಟಕ ಜಿಲ್ಲಾ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ ಬ್ರಹ್ಮಾವರ ಘಟಕ ಅಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ,
ಗೌರವಾಧ್ಯಕ್ಷ ಸುರೇಂದ್ರ ಪೂಜಾರಿ ಕಾಪು ಮಹಿಳಾಧ್ಯಕ್ಷೆ ಅನುಶೂಯ ಶೆಟ್ಟಿ ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಾಲ್ ಅಮೀನ್ ಬೆಂಗ್ರೆ ಕಾರ್ಮಿಕ ಯುವ ಅಧ್ಯಕ್ಷ ರೋಷನ್ ಬಂಗೇರ ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಶಾಬುದ್ದೀನ್ ಮಹಿಳಾ ಪ್ರಮುಖರುಗಳಾದ ಜ್ಯೋತಿ, ಕಾರ್ಮಿಕ ಘಟಕ ಸಂಘಟನಾ ಕಾರ್ಯದರ್ಶಿ ಮಜಿದ್ ಮತ್ತಿತರ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್ ಧನ್ಯವಾದ ಅರ್ಪಣೆಗೆದರು.
©2021 Tulunada Surya | Developed by CuriousLabs