ಮಂಗಳೂರು : ಮಂಗಳೂರಿನಲ್ಲಿ ಖಾಸಗಿ ಚಾನೆಲ್ ಒಂದರಲ್ಲಿ ಕ್ಯಾಮೆರಾಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿರೇಶ್ ಕಡ್ಲಿಕೊಪ್ಪ ಅವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಟಿವಿ 5 ಚಾನೆಲ್‌ನಲ್ಲಿ ಕ್ಯಾಮೆರಾಮೆನ್ ಆಗಿ ಕೆಲಸಮಾಡುತ್ತಿದ್ದ ಅವರು ಗದಗ ಮೂಲದವರು. ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದು ಎಲ್ಲರೊಂದಿಗೆ ಒಳ್ಳೆಯ ಒಡನಾಟದಲ್ಲಿದ್ದರು.
ಊರಿನಲ್ಲಿ ನಡೆಯುವ ಜಾತ್ರೆ ಹಾಗೂ ಹುಟ್ಟುಹಬ್ಬವನ್ನು ಆಚರಿಸಲು ತವರಿಗೆ ತೆರಳಿದ್ದರು. ಮೂಲತಃ ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದವರಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿರೇಶ್ ಕಡ್ಲಿಕೊಪ್ಪ ನಿಧನಕ್ಕೆ ಜಿಲ್ಲೆಯ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೌಟುಂಬಿಕ ಮನಸ್ತಾಪದಿಂದ ಆತ್ಮಹತ್ಯೆಯ ನಿರ್ಧಾರಕ್ಕೆ ಒಳಗಾಗಿರಬಹುದೆಂದು ಆಪ್ತ ವಲಯಗಳು ತಿಳಿಸಿವೆ