Monday, October 7, 2024
spot_img
More

    Latest Posts

    ಕೋಟೆಕಾರು ಬಾವಿ ಆವರಣ ಗೋಡೆ ಸ್ವಚ್ಛಗೊಳಿಸುತ್ತಿದ್ದಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

    ಉಳ್ಳಾಲ ತಾಲೂಕು ವ್ಯಾಪ್ತಿಯ ಕೋಟೆಕಾರು ನೆಲ್ಲಿಸ್ಥಳ ಕಾಳಿಕಾಂಬ ದೇವಸ್ಥಾನ ಬಳಿಯ ನೆತ್ತಿಲ ಎಂಬಲ್ಲಿ ಭಾವಿಯ ಆವರಣ ಗೋಡೆ ಸ್ವಚ್ಛ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಆಯತಪ್ಪಿ ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
    ಕೋಟೆಕಾರು ನೆತ್ತಿಲದ ಬಾಡಿಗೆ ಮನೆಯಲ್ಲಿ ವಾಸವಿದ್ದ ನವೀನ್ ಬೆಳ್ಚಡ (48) ವೃತ್ತ ವ್ಯಕ್ತಿ ನವೀನ್ ಅವರು ಭಾನುವಾರ ಸಂಜೆ 03:45 ಕ್ಕೆ ವೇಳೆ ಮನೆ ಹಿಂಭಾಗದ ಬಾವಿಯ ಆವರಣ ಗೋಡೆ ಸ್ವಚ್ಛಗೊಳಿಸುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ ಮನೆಯೊಳಗೆ ನವೀನ್ ಕಾಣದಿದ್ದಾಗ ಪತ್ನಿ ಮತ್ತು ಮಕ್ಕಳು ಹುಡುಕಾಡಿದ್ದು ಭಾವಿಯ ಬಳಿ ಬಂದಾಗ ಘಟನೆ ಬೆಳಕಿಗೆ ಬಂತು ಸ್ಥಳೀಯರು ಸೇರಿ ನವೀನ್ ಅವರನ್ನು ಬಾವಿಯಿಂದ ಮೇಲಕ್ಕೆ ಎತ್ತಿದಾಗ ಅವಾಗಲೇ ಮೃತಪಟ್ಟಿದ್ದರು. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ನವೀನ್ ಸ್ಥಳೀಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಮತ್ತು ಸಹಾಯ ಮಾಡುವ ಸ್ವಭಾವದವರಾಗಿದ್ದರು. ಅವರಿಗೆ ಎರಡನೇ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಮತ್ತು ನಾಲ್ಕನೇ ತರಗತಿ ಓದುತ್ತಿರುವ ಪುತ್ರನಿದ್ದಾನೆ. ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲು ಮಾಡಿರುತ್ತಾರೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss