ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಅನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ

ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಮೇ 10, 2021ರಿಂದ ಮೇ 24, 2021 ಲಾಕ್ಡೌನ್ ಘೋಷಣೆ ಮಾಡಿದೆ. ಈ ಸಮಯದಲ್ಲಿ ಯಾರೂ ಶೂಟಿಂಗ್ ಮಾಡುವಂತಿಲ್ಲ. ಧಾರಾವಾಹಿ, ರಿಯಾಲಿಟಿ ಶೋಗಳ ಶೂಟಿಂಗ್ ಕೂಡ ಮಾಡುವಂತಿಲ್ಲ. ಹಾಗಾದರೆ ಬಿಗ್ ಬಾಸ್ ಕನ್ನಡ ಸೀಸನ್ 8 ಕಥೆಯೇನು? ಈ ಕುರಿತು ಕಲರ್ಸ್ ಕನ್ನಡದ ಹೆಡ್ ಪರಮೇಶ್ವರ್ ಗುಂಡ್ಕಲ್ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದಾರೆ.
ಈ ಬಾರಿ ಫೆ. 28ರಂದು ಶೋ ಅದ್ದೂರಿಯಾಗಿ ಆರಂಭಗೊಂಡಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಕೊರೋನಾ ಗಣನೀಯವಾಗಿ ಹೆಚ್ಚಿದೆ ಹೀಗಾಗಿ ಶೋವನ್ನು ನಡೆಸುವುದು ,ಸಿಬ್ಬಂದಿಗಳಿಗೆ ಬರುವುದು ಕಷ್ಟವಾದ ಹಿನ್ನೆಲೆಯಲ್ಲಿ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಈಗ ಮನೆಯಲ್ಲಿ ಅರವಿಂದ್ ಕೆ.ಪಿ, ಮಂಜು ಪಾವಗಡ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ಚಂದ್ರಚೂಡ್, ಶಮಂತ್, ಶುಭಾ ಪೂಂಜಾ, ವೈಷ್ಣವಿ , ಪ್ರಿಯಾಂಕಾ, ರಘು ಗೌಡ ಇದ್ದರು. ಹೀಗಾಗಿ 71 ದಿನಗಳಲ್ಲಿ ಬಿಗ್ ಬಾಸ್ ಸೀಸನ್ 8 ಮುಕ್ತಾಯಗೊಳ್ಳುತ್ತಿದೆ