ಡಿ.ಆರ್.ಡಿ.ಒ. ಹಾಗೂ ಡಾಕ್ಟರ್ ರೆಡ್ಡಿ ಲ್ಯಾಬೊರೇಟರೀಸ್ ಕಂಪನಿಯ ಜೊತೆಗೂಡಿ ಕೊರೋನಾಕ್ಕೆ ಮದ್ದನ್ನು ಕಂಡುಹಿಡಿದಿದ್ದಾರೆ. ಈ ಬಗ್ಗೆ ಎಬಿಪಿ ನ್ಯೂಸ್ ವರದಿ ಮಾಡಿದೆ.
ಟು-ಡಿ.ಜಿ. ಹೆಸರಿನ ಗ್ಲೂಕೋಸ್ ರೀತಿಯ ಹುಡಿ ರೂಪದಲ್ಲಿ ದೊರೆಯುವ ಈ ಮದ್ದನ್ನು ಗ್ಲೂಕೋಸ್ನಂತೆ ನೀರಿನಲ್ಲಿ ಕರಗಿಸಿ ಸೇವಿಸಬಹುದಾಗಿದೆ.
ಡಿ.ಸಿ.ಜಿ.ಐ. ತುರ್ತು ಅನುಮತಿ ಮೇರೆಗೆ ಈ ಮದ್ದನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಸದ್ಯಕ್ಕೆ ದೇಶದ ಹತ್ತು ರಾಜ್ಯಗಳ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತಿದ್ದು, ಬಹಳಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಮದ್ದನ್ನು ಕಂಡುಹಿಡಿದ ವಿಜ್ಞಾನಿಗಳ ತಂಡದಲ್ಲಿದ್ದ ಡಾಕ್ಟರ್ ಎ.ಕೆ. ಮಿಶ್ರಾರವರು ಹೇಳುತ್ತಿರುವ ಪ್ರಕಾರ, ಈ ಮದ್ದನ್ನು ಹಂತ ಹಂತವಾಗಿ ಪ್ರಯೋಗಿಸಲಾಗುತ್ತಿದ್ದು, ಇದೀಗ ಮೂರನೇ ಹಂತದ ಪ್ರಯೋಗ ಯಶಸ್ವಿಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಈ ಮದ್ದನ್ನು ಸೇವಿಸುತ್ತಿರುವ ರೋಗಿಗಳ ಆಕ್ಸಿಜನ್ ಲೆವೆಲ್ ನಿಯಂತ್ರಣದಲ್ಲಿದೆ ಮಾತ್ರವಲ್ಲ ಹೆಚ್ಚುವರಿ ಆಕ್ಸಿಜನ್ ನೀಡುವ ಅವಶ್ಯಕತೆಯೇ ಇಲ್ಲ, ಹಿರಿಯ ವಯಸ್ಕರಿಗೂ ಈ ಮದ್ದನ್ನು ನೀಡಬಹುದಾಗಿದೆ ಎಂದಿದ್ದಾರೆ.
ಆದರೆ ಸೀರಿಯಸ್ ಹಂತದಲ್ಲಿ ಆಸ್ಪತ್ರೆಗೆ ತಂದ ರೋಗಿಗಳ ಮೇಲೆ ಈ ಔಷಧ ಪರಿಣಾಮ ಬೀರುವುದು ಕಷ್ಟ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಈ ಮದ್ದು ಔಷಧ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
©2021 Tulunada Surya | Developed by CuriousLabs