ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಮಂಗಳೂರು ಸಮೀಪದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಿಸ್ ಇಂಡಿಯಾ ಸಿನಿ ಶೆಟ್ಟಿ ಭೇಟಿ ನೀಡಿದರು.
ದೇವಳದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷ ವಸ್ತ್ರ ನೀಡಿ ಗೌರವಿಸಿದರು.
ಈ ಸಂದರ್ಭ ದೇವಳದ ಆಡಳಿತ ಮುಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರು ಗುತ್ತು, ಜಯರಾಮ ಮುಕಾಲ್ದಿ ಕೊಡೆತ್ತೂರು ಭಂಡಾರ ಮನೆ, ಮೂಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಅಧ್ಯಕ್ಷ ಪುರುಶೋತ್ತಮ ಶೆಟ್ಟಿ, ಶ್ರೀಧರ ಅಳ್ವ ಮಾಗಂದಡಿ, ಗಣೇಶ್ ಶೆಟ್ಟಿ ಮಿತ್ತಬೈಲ್ ಗುತ್ತು, ವಿಜಯ ಶೆಟ್ಟಿ ಅಜಾರ್ ಗುತ್ತು, ಸಾಯಿನಾಥ ಶೆಟ್ಟಿ, ಪ್ರೇಮ್ ರಾಜ್ ಶೆಟ್ಟಿ ಕೊಡೆತ್ತೂರು, ಅಭಿಲಾಷ್ ಶೆಟ್ಟಿ ಕಟೀಲು, ವರುಣ್ ಕಟೀಲು, ಚಂದ್ರಕಲಾ ಶೆಟ್ಟಿ, ಅಮೂಲ್ಯ ಯು ಶೆಟ್ಟಿ, ಶಾಲಿನಿ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.