ದಿನಾಂಕ 14-09-2024 ರಂದು ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ಘಟಕದ ಸಭೆ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಿ.ಐ . ಅಬೂಬಕರ್ ಕೈರಂಗಳ ರವರ ಅಧ್ಯಕ್ಷತೆಯಲ್ಲಿ ತುರವೇ ಕೇಂದ್ರಿಯ ಕಚೇರಿ ಜರುಗಿತು. ಸಭೆ ಯಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಸಮಸ್ಯೆ ನಿವಾರಣೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ನಿರ್ಧಾರಿಸಲಾಯಿತು. ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ನೂತನ ಸಂಘಟನಾ ಕಾರ್ಯದರ್ಶಿಯಾಗಿ ಫೋಟೋಗ್ರಾಫರ್, ಪತ್ರಕರ್ತರಾಗಿ ಮತ್ತು ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಯಶು ಪಕ್ಕಳ ತಲಪಡಿ ರವರು ಆಯ್ಕೆಯಾಗಿರುತ್ತಾರೆ ಇವರನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ರವರು ಸಂಘಟನೆಯ ಶಾಲು
ಹಾಕಿ ಅಭಿನಂದಿಸಿರುತ್ತಾರೆ. ಈ ಸಂದರ್ಭದಲ್ಲಿ ಉಳ್ಳಾಲ ತಾಲೂಕು ಅಧ್ಯಕ್ಷ ಡಿ . ಐ. ಅಬೂಬಕರ್ ಕೈರಂಗಳ , ಉಳ್ಳಾಲ ತಾಲೂಕು ಗೌರವಾಧ್ಯಕ್ಷ ಡಾ! ಶೇಕ್ ಭಾವ , ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಸುಕೇಶ್ ಜಿ. ಕೆ. ಉಚ್ಚಿಲ್, ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ , ರೆಹಮತುಲ್ಲಾ ಉಳ್ಳಾಲ್ , ತನ್ವೀರ್ ಮತ್ತಿತರರು ಉಪಸ್ಥಿತರಿದ್ದರು
©2021 Tulunada Surya | Developed by CuriousLabs