ದಿನಾಂಕ 23-06-2024 ರವಿವಾರ ರಂದು 2:30 ಕ್ಕೆ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವಿವಿಧ ಘಟಕಗಳ (ಮಹಿಳಾ ಘಟಕ, ಯುವ ಘಟಕ, ಕಾರ್ಮಿಕ ಘಟಕ ಜಂಟಿ )ಮಹಾಸಭೆ ನಡೆಯಲಿದೆ..
ಜಿಲ್ಲೆ ವಿವಿಧ ಘಟಕಗಳ ಪದಾಧಿಕಾರಿಗಳು ಸಾಮೂಹಿಕ ಕೂಡುವಿಕೆ ಕಾರ್ಯಕ್ರಮ ಇದಾಗಿದ್ದು ಜಿಲ್ಲೆಯ ಪ್ರಮುಖ ಎಲ್ಲಾ ಪದಾಧಿಕಾರಿಗಳು ಭಾಗವಹಿಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಸಂಘಟನೆ ಬಲಪಡಿಸಲು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಸಕ್ರಿಯ ಕಾರ್ಯಕರ್ತರಿಗೆ ಪ್ರಮುಖ ಜವಾಬ್ದಾರಿ ಘೋಷಣೆ ಮಾಡುವ ಸಾಧ್ಯತೆ ಇದೆ. ಬಳಿಕ ಯುವ ಘಟಕ ಜಿಲ್ಲಾ ಉಪಾಧ್ಯಕ್ಷ ರಾಹುಲ್ ಪೂಜಾರಿ ಅವರ ಹುಟ್ಟುಹಬ್ಬ ಆಚರಣೆ ಕೂಡ ನಡೆಯಲಿದೆ. ಸರ್ವರೂ ಆಗಮಿಸುವಂತೆ ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜ, ಜಿಲ್ಲಾ ಅಧ್ಯಕ್ಷ ಕೃಷ್ಣಕುಮಾರ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಮಣ್ಯ ನಗರ ಜಂಟಿ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ
©2021 Tulunada Surya | Developed by CuriousLabs