ಅಮ್ಮುಂಜೆ ಸೇಕ್ರೆಡ್ ಹಾರ್ಟ್ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು ಸಮಾಜ ಸೇವಕರು ಹಾಗೂ ಉಡುಪಿ ಜಿಲ್ಲಾ ತುಳುನಾಡು ರಕ್ಷಣಾ ವೇದಿಕೆಯ ಜಿಲ್ಲಾ ವೀಕ್ಷಕರು ವಿದ್ಯಾಪೋಷಕರಾದ ಪ್ರ್ಯಾಂಕಿ ಡಿ.ಸೋಜಾ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ನೀಡಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮ ಗುರುಗಳಾದ ರೆವೆರೆಂಡ್ ಫಾದರ್ ಜೋಸೆಫ್ ಮಚಾದೊ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳಿಗೆ ಹರಸಿ, ಗ್ರಾಮೀಣ ಪ್ರದೇಶದ ವಿವಿಧ ಶಾಲೆಗಳಿಗೆ ಪ್ರತೀವರ್ಷ ನೋಟ್ ಬುಕ್ ಹಾಗೂ ಇನ್ನಿತರ ವಸ್ತುಗಳನ್ನು ನೀಡುವ ಫ್ರ್ಯಾಂಕಿಯವರ ಸೇವೆಯನ್ನು ಶ್ಲಾಘಿಸಿದರು… ವೇದಿಕೆಯಲ್ಲಿ ಶಿಕ್ಷಣ ಸಂತ ವಿಜಯ್ ಮಾಯಾಡಿ.. ಸಂದೀಪ್ ನಾಯಕ್ ಅಮ್ಮುಂಜೆ, ಪಂಚಾಯತ್ ಸದಸ್ಯ ಅಶ್ವಿನ್ ರೋಚ್, ಆಶಾ, ಹಳೆವಿದ್ಯಾರ್ಥಿಗಳು, ಶಿಕ್ಷಕ ವೃಂದ, ಮತ್ತು ಪೋಷಕರು ಉಪಸ್ಥಿತರಿದ್ದರು..
ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು.. ಅಶ್ವಿನಿ ಟೀಚರ್ ಧನ್ಯವಾದ ನೀಡಿದರು.. ಮಮತ ಟೀಚರ್ ಕಾರ್ಯಕ್ರಮ ನಿರೂಪಿಸಿದರು..
©2021 Tulunada Surya | Developed by CuriousLabs