ಹೊಸದಿಲ್ಲಿ: ವಿಮಾನ ಪ್ರಯಾಣ ಮಾಡುವ ಪ್ರಯಾಣಿಕರ ಮಾಹಿತಿ ಇನ್ನು ಕೇಂದ್ರ ಸರ್ಕಾರದ ಕೈ ಸೇರಲಿದೆ. ದೇಶ ಅಥವಾ ವಿದೇಶ ಪ್ರಯಾಣ ಮಾಡುವ ಪ್ರತಿ ಪ್ರಯಾಣಿಕರ ಪೂರ್ಣ ಮಾಹಿತಿಯನ್ನು ಕೇಂದ್ರಕ್ಕೆ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.
ವಿಮಾನಯಾನ ಸಂಸ್ಥೆಗಳು ವಿಮಾನ ನಿಲ್ದಾಣದಿಂದ ಹೊರಡುವ 24 ಗಂಟೆ ಮೊದಲು ಪ್ರಯಾಣಿಕರ ಮಾಹಿತಿಯನ್ನು ಕೇಂದ್ರದ ಸಂಸ್ಥೆಗಳಿಗೆ ನೀಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಕೇಂದ್ರ ಪರೋಕ್ಷ ತೆರಿಗೆ ಹಾಗೂ ಸುಂಕ ಮಂಡಳಿ, ಕಸ್ಟಮ್ಸ್ ಟಾರ್ಗೆಟ್ ಸೆಂಟರ್ ಜೊತೆ ಮಾಹಿತಿ ವಿನಿಮಯ ಮಾಡಿಕೊಳ್ಳುವಂತೆ ಕೇಂದ್ರ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ. ಎರಡು ಉದ್ದೇಶಗಳಿಗೆ ಈ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಹಣಕಾಸು ಇಲಾಖೆ ಹೇಳಿಕೊಂಡಿದ್ದು , ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಗುವ ಅನಾನುಕೂಲ ತಪ್ಪಿಸುವ ಉದ್ದೇಶವಿದೆ ಎಂದು ಹೇಳಿದೆ. ಅಪರಾಧ ತಡೆಗಟ್ಟುವ ಪ್ರಕ್ರಿಯೆಯ ಭಾಗವಾಗಿ ಈ ನಿಯಮ ಮಾಡಲಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.
