ಪುತ್ತೂರಿನ ಕೆದಂಬಾಡಿ ಗ್ರಾಮದ ಪ್ರಗತಿಪರ ಕೃಷಿಕರಾಗಿದ್ದ ದಿ. ಮಿತ್ರಂಪಾಡಿ ಚೆನ್ನಪ್ಪ ರೈ ಮತ್ತು ದಿ.ಡಿಂಬ್ರಿ ಗುತ್ತು ಸರಸ್ವತಿ ರೈಯವರು ಪುತ್ರನಾಗಿರುವ ಜಯರಾಮ ರೈಯವರು ಬೆಂಗಳೂರಿನ ಯುವ ಬಂಟ ಸಮಾಜದ ಅಧ್ಯಕ್ಷರಾಗಿ, ಕನ್ನಡ ಮತ್ತು ತುಳುವೆರೆಂಕುಳು, ಲಯನ್ಸ್ ಕ್ಲಬ್ ಹಾಗೂ ಇನ್ನಿತರ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಮತ್ತು ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1999ರಲ್ಲಿ ಕೊಲ್ಲಿರಾಷ್ಟ್ರ ಅರಬ್ ಸಂಯುಕ್ತ ಸಂಸ್ಥಾನದ ಅಬುದಾಬಿಯಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ರೈಯವರು ಬಿನ್ ಫರ್ದಾನ್ ಗ್ರೂಫ್‌ನ ಫೈನಾನ್ಸ್ ಮ್ಯಾನೇಜರ್ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಲ್ಲಿ ರೈಯವರ ಕೊಡುಗೆ ಅಪಾರವಾಗಿದ್ದು ಅಭಿನಂದಿಸಲ್ಪಟ್ಟು ಸಿ.ಎಫ್.ಒ. ಆಗಿ ಎತ್ತರದ ಸ್ಥಾನ ಲಭಿಸಿದ್ದು, ಪ್ರಸ್ತುತ ಗೌರವದ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡಿದ್ದು ತಮ್ಮ ಬಿಡುವಿನ ಸಮಯವನ್ನು ಸಮಾಜಸೇವೆಗಾಗಿ ಮೀಸಲಾಗಿಟ್ಟಿದ್ದಾರೆ. ಇಂಡಿಯ ಸೋಶಿಯಲ್ ಸೆಂಟರ್ ಟೋಸ್ಟ್ ಮಾಸ್ಟರ್ ಇಂಟರ್ ನ್ಯಾಷನಲ್ ಅಬುದಾಬಿ ಇದರ ಸ್ಥಾಪಕ ಅಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿರುವ ಇವರು ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್‌ನ ಸೆಂಟರ್‌ನ ಗೌರವಾನ್ವಿತ ಲೆಕ್ಕ ಪರಿಶೋಧಕರಾಗಿ, ಚೀಫ್ ಪೋಲಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿ ಜನಪ್ರಿಯತೆ ಪಡೆದಿದ್ದಾರೆ. ಇದರ ಫಲವಾಗಿ ಅತ್ಯಧಿಕ ಬಹುಮತದಿಂದ 2018-19ನೇ ಸಾಲಿನ ಉಪಾಧ್ಯಕ್ಷರಾಗಿ ಜಯಗಳಿಸಿ ಮತ್ತು ಅಧಿಕಾರದ ಅವಧಿಯಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ಸಾಂಸ್ಕೃತಿಕ ಬಾಂಧವ್ಯವನ್ನು ಉತ್ತುಂಗಕ್ಕೆ ಏರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಯು.ಎ.ಇ. ಯಲ್ಲಿ ಅನಿವಾಸಿ ಭಾರತೀಯ ಸಂಘಟನೆಗಳು ಭಾರತೀಯ ಸಂಸ್ಕೃತಿ ಆಚಾರ ವಿಚಾರಗಳನ್ನು ಗಲ್ಫ್ ನಾಡಿನಲ್ಲಿ ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದೆ. ಇದೇ ರೀತಿಯಲ್ಲಿ ಕರ್ನಾಟಕ ಪರ ಸಂಘಟನೆಗಳು ಕನ್ನಡ, ತುಳು, ಕೊಂಕಣಿ, ಬ್ಯಾರಿ ಮತ್ತು ಕೊಡವ ಭಾಷಾ ಚಟುವಟಿಕೆಗಳನ್ನು ನಡೆಸಿಕೊಂಡು ಕಾರ್ಯೋನ್ಮುಖವಾಗಿವೆ. ಇಂತಹ ಸಂಘಟನೆಗಳಿಗೆ ರೈಯವರು ಸದಾ ಬೆಂಬಲ, ಪ್ರೋತ್ಸಾಹ ಮತ್ತು ಪ್ರಾಯೋಜಕತ್ವ ನೀಡುತ್ತಾ ಬರುತ್ತಿದ್ದಾರೆ

ರೈಯವರು ಉತ್ತಮ ರಂಗ ಕಲಾವಿದರೂ ಆಗಿದ್ದು ಯು.ಎ.ಇ.ಯಲ್ಲಿ ನಡೆಯುವ ಕನ್ನಡ ಮತ್ತು ತುಳು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಐತಿಹಾಸಿಕ ಸಾಮಾಜಿಕ ನಾಟಕಗಳಲ್ಲಿ ಮುಖ್ಯವಾಗಿ ದೇವ ಪೂಂಜ ಮತ್ತು ಸಂಗೊಳ್ಳಿ ರಾಯಣ್ಣ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಇವರು ರಚಿಸಿ ನಿರ್ದೇಶಿಸಿ, ನಟಿಸಿರುವ ಮಂತ್ರಿಮಂಡಲ ಮತ್ತು ಅಪ್ಪೆನ ತ್ಯಾಗ ನಾಟಕಗಳನ್ನು ವೀಕ್ಷಿಸಿರುವ ಯು.ಎ.ಇ.ಯ ಹಿರಿಯ ಉದ್ಯಮಿ ಡಾ| ಬಿ.ಆರ್. ಶೆಟ್ಟಿಯವರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ದುಬಾಯಿಯಲ್ಲಿ ನಡೆದ ಯು.ಎ.ಇ. ಬಂಟ್ಸ್ ಸ್ನೇಹ ಮಿಲನ, ತುಳುಕೂಟ, ಕರ್ನಾಟಕ ಸಂಘ ಮತ್ತು ಬದಿಯಡ್ಕದಲ್ಲಿ ನಡೆದ ವಿಶ್ವಸಮ್ಮೇಳನದ ವೇದಿಕೆಗಳಲ್ಲಿ ಜಯರಾಮ ರೈಯವರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಯು.ಎ.ಇ.ಯಲ್ಲಿ ನಡೆಯುವ ಸ್ನೇಹ ಮಿಲನ, ವಿಹಾರ ಕೂಟ, ಕ್ರೀಡಾ ಕೂಟ, ಪೂಜಾ ಸಮಾರಂಭ, ಸಾಹಿತ್ಯ ಸಮ್ಮೇಳನಗಳಿಗೆ ಸಹಾಯ ಹಸ್ತ ನೀಡುವುದರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಸಮಾರಂಭಗಳ ಯಶಸ್ಸಿನಲ್ಲಿ ಇವರು ಭಾಗಿಯಾಗಿರುತ್ತಾರೆ. ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ಸ್ಥಾಪನೆಯಾಗಿರುವ ಯಕ್ಷ ದ್ರುವ ಪಟ್ಲ ಪೌಂಢೇಶನ್ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಹುಟ್ಟೂರಿನಲ್ಲಿಯೂ ವಿದ್ಯಾಸಂಸ್ಥೆಗಳಿಗೆ, ದೇವಸ್ಥಾನಗಳಿಗೆ ದೇಣಿಗೆ, ಬಡ ವಿದ್ಯಾರ್ಥಿಗಳು ಮತ್ತು ನೊಂದವರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ
2022 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಇಂಟರ್‌ನ್ಯಾಷನಲ್ ಐಕಾನಿಕ್ ಪ್ರಶಸ್ತಿ, ಗಡಿನಾಡ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ಗ್ಲೋಬಲ್ ಮೆನ್ ಅವಾರ್ಡ್ ಸಹಿತ ಹಲವು ಪ್ರಶಸ್ತಿ, ಸನ್ಮಾನಗಳನ್ನು ಮುಡಿಗೇರಿಸಿಕೊಂಡಿರುವ ಜಯರಾ ರೈಯವರು ಡಿಸ್ಟಿಂಗ್ವಿಶ್ ಟೋಸ್ಟ್ ಮಾಸ್ಟರ್ ಮತ್ತು ಟ್ರಿಪಲ್ ಕ್ರೌನ್ ಅವಾರ್ಡ್ ಪುರಸ್ಕೃತರೂ ಆvದ್ದಾರೆ. ಪತ್ನಿ ಶ್ರೀಮತಿ ಆಶಾ ಜೆ.ರೈ, ಪುತ್ರ ತಾರಾನಾಥ ರೈ ಮತ್ತು ಪುತ್ರಿ ಪ್ರಾಂಜಲ ರೈಯವರೊಂದಿಗೆ ಜಯರಾಮ ರೈಯವರು ಸುಖೀ ಸಂಸಾರಿಯಾಗಿದ್ದಾರೆ
ನಮ್ಮ ತುಳುನಾಡ ಸೂರ್ಯ ಮತ್ತು ತುಳುನಾಡ ರಕ್ಷಣಾ ವೇದಿಕೆ ಸಂಸ್ಥೆಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡ ಬಯಸುವವರು ಸಂಪರ್ಕ ಸಂಖ್ಯೆ – 9019387676